ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದು ಸುಳ್ಳು, ಬೊಕ್ಕಸ ತುಂಬಿದೆ: ಸಚಿವ ಆರ್.ಅಶೋಕ್ - Mahanayaka

ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದು ಸುಳ್ಳು, ಬೊಕ್ಕಸ ತುಂಬಿದೆ: ಸಚಿವ ಆರ್.ಅಶೋಕ್

r ashok
13/12/2022

ಚಾಮರಾಜನಗರ: ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದು ಸುಳ್ಳು, ನಮ್ಮ ಬೊಕ್ಕಸ ತುಂಬಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಹನೂರಿನಲ್ಲಿ ಇಂದು ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಣ ಇಲ್ಲ- ಹಣ ಇಲ್ಲಾ ಅಂಥಾ ಯಾರ್ಯಾರೋ ಅಂತಿರ್ತಾರೆ. ಆದರೆ, ನಮ್ಮ ಸರ್ಕಾರದ ಬೊಕ್ಕಸ ತುಂಬಿದೆ, ಹಿಂದಿನ ಯಾವ ಸರ್ಕಾರದಲ್ಲಿರದಷ್ಟು ಹಣ ನಮ್ಮ ಸರ್ಕಾರದಲ್ಲಿದೆ, ಹಣ ಇದ್ದಿದ್ದರಿಂದಲೇ ಸಾವಿರಾರು ಕೋಟಿ ರೂ. ಯೋಜನೆ ಘೋಷಣೆಯಾಗುತ್ತಿದೆ- ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ, 40 ವರ್ಷಗಳಿಂದ ಒಂದೇ ಮನೆಯಲ್ಲಿದ್ದಾರೆ, ಅವರು ಯಾವ ಮನೆಯನ್ನೂ ಕಟ್ಟಿಕೊಂಡಿಲ್ಲ, ಜನಪರವಾಗಿ, ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ ರೈತರಿಗೆ ನಮ್ಮ ಸರ್ಕಾರ ಯಾವುದೇ ತೊಂದರೆ ಕೊಡುವುದಿಲ್ಲ, ಶೀಘ್ರದಲ್ಲೇ ಹಕ್ಕುಪತ್ರಗಳನ್ನು ನೀಡುತ್ತೇವೆ. ನಮ್ಮದು ಡಬಲ್ ಎಂಜಿನ್ ಸರ್ಕಾರ, ಎರಡು ಪಟ್ಟು ವೇಗದಲ್ಲಿ ಅಭಿವೃದ್ಧಿ ಎಂದು ಹೇಳಿದರು.

ಸಚಿವ ಸೋಮಣ್ಣ ಮಾತನಾಡಿ ಕಾಡೊಳಗಿರುವ ಚಂಗಡಿ ಗ್ರಾಮವನ್ನು ಶೀಘ್ರವೇ ಸ್ಥಳಾಂತರಿಸಲು ರೂಪುರೇಷೆ ಸಿದ್ಧವಾಗುತ್ತಿದೆ ಆ ಕಾರ್ಯ ತ್ವರಿತವಾಗಿ ಆಗಲಿದೆ, ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಅಭಿಪ್ರಾಯಪಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ