ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಗಳು
ಕಾರವಾರ: ಬೀಚ್ ನಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ ವಿದೇಶಿ ಪ್ರವಾಸಿಗನನ್ನು ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನಡೆದಿದೆ.
ಇಟೆಲಿ ಮೂಲದ ವಿದೇಶಿ ಪ್ರವಾಸಿಗ ಜಾರ್ಜ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಈತ ಸಮುದ್ರದ ಆಳ ತಿಳಿಯದೇ ಈಜಾಡಲು ಹೋಗಿದ್ದು, ಸಮುದ್ರದ ಸುಳಿಗೆ ಸಿಲುಕಿದ್ದಾನೆ. ಈ ವೇಳೆ ಲೈಫ್ ಗಾರ್ಡ್ ಗಳನ್ನು ಸಹಾಯಕ್ಕಾಗಿ ಕೂಗಿದ್ದಾನೆ.
ಈ ವೇಳೆ ಲೈಫ್ ಗಾರ್ಡ್ ಗಳಾದ ನಾಗೇಂದ್ರ ಎಸ್.ಕೂರ್ಲೆ, ಪ್ರದೀಪ್ ಅಂಬಿಗ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಅವರು ತಕ್ಷಣವೇ ಜಾರ್ಜ್ ನನ್ನು ನೀರಿನಿಂದ ಮೇಲೆತ್ತಿ ಪ್ರಾಣ ಉಳಿಸಿದ್ದಾರೆ.
ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಐದು ಜನ ದೇಶ—ವಿದೇಶಿ ಪ್ರವಾಸಿಗರನ್ನು ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ್ದಾರೆ. ಹೊಸ ವರ್ಷ ಹಾಗೂ ಕ್ರಿಸ್ ಮಸ್ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: