ಲಿಫ್ಟ್ ಕೊಡುವ ನೆಪದಲ್ಲಿ ಗ್ರಾಮದ ಮುಖಂಡರಿಂದಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಆಗ್ರಾ: ಲಿಫ್ಟ್ ಕೊಡುವ ನೆಪದಲ್ಲಿ 25 ವರ್ಷ ವಯಸ್ಸಿನ ಮಹಿಳೆಯನ್ನು ಅತ್ಯಾಚಾರ ನಡೆಸಿರುವ ಘಟನೆ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಪಿನ್ಹಾಟ್ ಪ್ರದೇಶದಲ್ಲಿ ನಡೆದಿದ್ದು, ಮನಸುಖ್ ಪುರ ಪ್ರದೇಶದಲ್ಲಿ ಮಹಿಳೆ ಪೋಷಕರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ಘಟನೆ ನಡೆದಿದೆ.
ಘಟನೆ ಸಂಬಂಧ ಸಂತ್ರಸ್ತೆ ನೀಡಿರುವ ದೂರಿನನ್ವಯ ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಮಹಿಳೆ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಊರಿಗೆ ಹೋಗಿ ಬರುವಾಗ ಪತಿ ಕೆಲಸದ ನಿಮಿತ್ತ ಮಾರುಕಟ್ಟೆಗೆ ಹೋಗಿದ್ದಾನೆ. ಮಹಿಳೆ ಮಕ್ಕಳೊಂದಿಗೆ ಮನೆಗೆ ಹೊರಟಿದ್ದಾಳೆ. ಈ ವೇಳೆ ಗ್ರಾಮದ ಮುಖಂಡರಾದ ಅಭಿಷೇಕ್ ತ್ಯಾಗಿ ಮತ್ತು ಆತನ ಸ್ನೇಹಿತ ವಿನೋದ್ ಲಿಫ್ಟ್ ಕೊಡುವುದಾಗಿ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅತ್ಯಾಚಾರದ ಪರಿಣಾಮ ,ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆರೋಪಿಗಳು ಅತ್ಯಾಚಾರ ನಡೆಸಿದ ಸ್ಥಳದಲ್ಲಿಯೇ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಪ್ರಜ್ಞೆ ಮರಳಿದ ಬಳಿಕ ಮಹಿಳೆ ತನ್ನ ಪತಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಆರೋಪಿಗಳ ಪತ್ತೆಯಾಗಿ ಶೋಧ ಆರಂಭಿಸಿದ್ದಾರೆ.