ಕುಳಿತುಕೊಳ್ಳಿ ಎಂದಿದ್ದೇ ತಪ್ಪಾಯ್ತಂತೆ: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ

ಚಿಕ್ಕಮಗಳೂರು : ಆಸ್ಪತ್ರೆಗೆ ಬಂದವರಿಗೆ ಕುಳಿತುಕೊಳ್ಳಿ ಎಂದಿದ್ದೇ ತಪ್ಪಾಯ್ತಂತೆ, ಕರ್ತವ್ಯ ನಿರತ ವೈದ್ಯರ ಶರ್ಟ್ ಹರಿದು ಹಲ್ಲೆ ನಡೆಸಿದ ಘಟನೆಯೊಂದು ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಡಾ. ಮುರುಳಿ, ಹಲ್ಲೆಗೊಳಗದ ವೈದ್ಯರಾಗಿದ್ದಾರೆ. ಮರದಿಂದ ಬಿದ್ದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರ ಮೇಲೆ ಧರಣೇಂದ್ರ ಜೈನ್, ಸುರೇಶ್, ಸುಹಾನ್ ಎಂಬವರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಇನ್ನೂ ವೈದ್ಯರ ಮೇಲೆ ಹಲ್ಲೆ ತಡೆಯಲು ಬಂದ ಡಿ ದರ್ಜೆ ಮಹಿಳಾ ನೌಕರರ ಮೇಲೂ ಹಲ್ಲೆಗೆ ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿದ ಮೂವರ ಮೇಲೆ ಡಾ.ಮುರುಳಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯಿಂದ ಬೇಸತ್ತ ಡಾ.ಮುರುಳಿ, ಈ ಕೆಲಸವೇ ಬೇಡ ರಾಜೀನಾಮೆ ಕೊಡ್ತೀನಿ ಅಂತ ಕೂತಿದ್ದಾರೆ. ಇನ್ನೊಂದೆಡೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮುಂದೆ ನೂರಾರು ಬಡ ರೋಗಿಗಳು ಕಾಯುತ್ತಿರುವುದು ಕಂಡು ಬಂತು.
ಕಳಸ ಆಸ್ಪತ್ರೆಗೆ ವೈದ್ಯರೇ ಬರೋದಿಲ್ಲ, 10 ತಿಂಗಳಿಂದ ಇದ್ದ ವೈದ್ಯರೂ ಮೇಲೂ ಹಲ್ಲೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಸೇವೆಗೆ ತೊಂದರೆಯುಂಟಾಗಿದೆ.
ಹಲ್ಲೆ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರ ಒತ್ತಡ ಹಿನ್ನೆಲೆ ಬಂಧನಕ್ಕೆ ಪೊಲೀಸರ ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7