ಮದ್ಯ ಮಾರಾಟಕ್ಕೆ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ರತನ್ ಟಾಟಾ ಹೇಳೇ ಇಲ್ಲ: ಮಹಾ ಸುಳ್ಳು ಬಯಲು
ರತನ್ ಟಾಟಾ ಹೆಸರು ಮತ್ತೆ ವೈರಲ್ ಆಗುತ್ತಿದೆ. ಇವರು ಮದ್ಯ ಮಾರಾಟಕ್ಕೆ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕೆಂದು ಹೇಳಿದ್ದಾರೆ ಎನ್ನುವ ಪೋಸ್ಟ್ ಈಗ ಮತ್ತೆ ವೈರಲ್ ಆಗುತ್ತಿದೆ.
ಎರಡು ವರ್ಷಗಳ ಹಿಂದೆಯೂ ಈ ಪೋಸ್ಟ್ ವೈರಲ್ ಆಗಿತ್ತು. ‘ಮದ್ಯವನ್ನು ಆಧಾರ್ ಕಾರ್ಡಿನ ಮೂಲಕವೇ ವ್ಯವಹರಿಸಬೇಕು. ಯಾರು ಮದ್ಯವನ್ನು ಕೊಳ್ಳುತ್ತಾರೋ ಅವರಿಗೆ ಸರ್ಕಾರ ನೀಡುವ ಸವಲತ್ತು ಹಾಗೂ ಸಬ್ಸಿಡಿಗಳನ್ನು ರದ್ದು ಪಡಿಸಬೇಕು. ಯಾರು ಆಲ್ಕೋಹಾಲನ್ನು ಹಣಕೊಟ್ಟು ಕೊಳ್ಳಬಲ್ಲರೋ ಅವರು ಆಹಾರವನ್ನು ಸಹ ಹಣಕೊಟ್ಟು ಕೊಳ್ಳಬಲ್ಲರು. ಅವರಿಗೆ ನಾವು ಆಹಾರವನ್ನು ಉಚಿತವಾಗಿ ಹೀಗೆ ನೀಡುತ್ತಲೇ ಹೋದರೆ ಅವರು ಹೀಗೆ ಹಣಕೊಟ್ಟು ಕುಡಿಯುತ್ತಲೇ ಇರುತ್ತಾರೆ’ ಎಂದು ರತನ್ ಟಾಟಾ ಹೇಳಿರುವುದಾಗಿ ಅವರ ಫೋಟೊದಿಂದಿಗೆ ಕನ್ನಡದಲ್ಲಿ ಬರೆದಿರುವ ಬರಹ ಸಾಮಾಜಿಕ ಮಾಧ್ಯಗಳಲ್ಲಿ ಶೇರ್ ಆಗುತ್ತಿದೆ.
2 ವರ್ಷಗಳ ಹಿಂದೆ ಇದೇ ಪೋಸ್ಟ್ ಇಂಗ್ಲಿಷ್ ನಲ್ಲಿ ಹರಿದಾಡಿತ್ತು. ಆಗ ಬೂಮ್ಲೈವ್ ಆ ಪೋಸ್ಟ್ನ ಫ್ಯಾಕ್ಟ್ ಚೆಕ್ ಮಾಡಿ ವೈರಲ್ ಪೋಸ್ಟ್ ಸುಳ್ಳು ಎಂದಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರತನ್ ಟಾಟಾ ಅವರು, ನಾನು ಈ ರೀತಿ ಹೇಳಿಲ್ಲ ಎಂದು ಅವರೇ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿದ್ದಾರೆ. ಈ ಹಿಂದೆಯೂ ಟಾಟಾ ಹೇಳಿದ್ದಾರೆ ಎನ್ನಲಾಗುವ ಪೋಸ್ಟ್ ಗಳು ವೈರಲ್ ಆಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw