ಲೈವ್ ಕಾರ್ಯಕ್ರಮದ ವೇಳೆಯೇ ನಿರೂಪಕನ ಮೇಲೆ ಬಿದ್ದ ಸ್ಟುಡಿಯೋದ ಗೋಡೆ!
ಕೊಲಂಬಿಯಾ: ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ನಿರೂಪಕನ ಮೇಲೆ ಟಿವಿ ಸ್ಟುಡಿಯೋದ ಸೆಟ್ ಕಳಚಿ ಬಿದ್ದ ಘಟನೆ ನಡೆದಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ನೇರ ಪ್ರಸಾರದಲ್ಲಿಯೇ ಈ ದುರ್ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಎಸ್ ಪಿಎನ್ ಚಾನೆಲ್ ನಲ್ಲಿ ನೇರ ಪ್ರಸಾರ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ನಿರೂಪಕ ಕ್ರೀಡಾ ವಿಶ್ಲೇಷಣೆಯನ್ನು ಮಾಡುತ್ತಿದ್ದ ವೇಳೆ ನಿರೂಪಕನ ಹಿಂದೆ ಇದ್ದ ಸ್ಟುಡಿಯೋ ಸೆಟ್ ನಿರೂಪಕನ ಮೇಲೆ ಬಿದ್ದಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಲೈವ್ ಕಾರ್ಯಕ್ರಮವಾಗಿರುವುದರಿಂದ ಘಟನೆ ನಡೆದ ತಕ್ಷಣವೇ ಯಾರೂ ಕೂಡ ಸ್ಥಳಕ್ಕೆ ಹೋಗಲಿಲ್ಲ. ತಕ್ಷಣವೇ ಟಿವಿಯಲ್ಲಿ ಬ್ರೇಕ್ ತೆಗೆದುಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಕೂಡ ಮೊಟಕುಗೊಳಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ನಿರೂಪಕನ ಮೂಗಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆ ಸಂದರ್ಭದಲ್ಲಿ ಕ್ರೀಡಾ ಲೋಕದ ದಿಗ್ಗಜರು ಕೂಡ ಸ್ಟುಡಿಯೋದಲ್ಲಿದ್ದರು.
Shocking video. ESPN anchor crushed live on the air by falling set piece. Thankfully he was uninjured. pic.twitter.com/CeFxy8AksY
— Mike Sington (@MikeSington) March 10, 2021