“ಲೋನ್ ಆ್ಯಪ್ ನಿಂದ ಸಾಲ ಪಡೆದು ಮಾನ, ಪ್ರಾಣ ಕಳೆದುಕೊಳ್ಳಬೇಡಿ”
ಮಂಗಳೂರು: ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಲೋನ್ ಆ್ಯಪ್ ಗಳನ್ನು ಬಳಸಿ ಲೋನ್ ಪಡೆದುಕೊಳ್ಳದಂತೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಲೋನ್ ಆ್ಯಪ್ ಗಳ ಕಿರುಕುಳದಿಂದ ನೊಂದು ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯ 26 ವರ್ಷ ವಯಸ್ಸಿನ ಯುವಕ ಸುಶಾಂತ್ ಕುಮಾರ್ ಎಂಬಾತ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಎನ್.ಶಶಿಕುಮಾರ್ ಅವರು ಲೋನ್ ಆ್ಯಪ್ ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಚೀನಾ ಮೂಲದ ಲೋನ್ ಆ್ಯಪ್ ಗಳು ಪ್ಲೇ ಸ್ಟೋರ್ ನಲ್ಲಿದ್ದು, ಈ ಆ್ಯಪ್ ಗಳು ಇನ್ಸ್ ಸ್ಟಾಲ್ ಮಾಡುವ ವೇಳೆ ಅನೇಕ ಷರತ್ತುಗಳನ್ನು ವಿಧಿಸುತ್ತವೆ. ಕಾಂಟಾಕ್ಟ್, ಬೆತ್ತಲೆ ಫೋಟೋ, ವಿಡಿಯೋ, ಕ್ಯಾಮರಾ ಇತ್ಯಾದಿಗಳನ್ನು ಮುಕ್ತವಾಗಿ ಪಡೆದುಕೊಳ್ಳುವ ಆಪ್ಷನ್ ಕೇಳಲಾಗುತ್ತದೆ. ಎಲ್ಲದಕ್ಕೂ ಎಸ್ ಎಂದರಷ್ಟೇ ಆ್ಯಪ್ ಇನ್ ಸ್ಟಾಲ್ ಪೂರ್ಣಗೊಳ್ಳುತ್ತದೆ.
ಇದಾದ ಬಳಿಕ ಕನಿಷ್ಠ 3 ಸಾವಿರದಿಂದ 6 ಸಾವಿರದ ವರೆಗೆ ಈ ಆ್ಯಪ್ ಲೋನ್ ಕೊಡುತ್ತದೆ. ಒಂದು ವೇಳೆ ಬಾಕಿ ಮೊತ್ತ ಹಿಂದಿರುಗಿಸದಿದ್ದರೆ, ಬೆತ್ತಲೆ ಫೋಟೋವನ್ನು ಕಾಂಟಾಕ್ಟ್ ಲಿಸ್ಟ್ ನಲ್ಲಿದ್ದವರಿಗೆ ಕಳುಹಿಸುವುದು, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ನಕಲಿ ಎಫ್ ಐಆರ್ ಪ್ರತಿಕಳಿಸಿ ಹೆದರಿಸಲಾಗುತ್ತದೆ.
ಆ್ಯಪ್ ನವರ ಇಂತಹ ಕೃತ್ಯದಿಂದಾಗಿ ಕೆಲವರು ಮಾನ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಆ್ಯಪ್ ಗೆ ಆರ್ ಬಿಐ ಸಹಿಯ ಯಾರಿಂದಲೂ ಮಾನ್ಯತೆ ಇಲ್ಲ. ಹಾಗಾಗಿ ಇಂತಹ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡು ಯಾರು ಕೂಡ ತೊಂದರೆಗೆ ಸಿಲುಕದಿರಿ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಾದಯಾತ್ರೆಯ ವೇಳೆ ಚರ್ಚೆಗೀಡಾದ ಡಿ.ಕೆ.ಸುರೇಶ್ ವರ್ತನೆ
1ರಿಂದ 9ನೇ ತರಗತಿ ಮಕ್ಕಳಿಗೆ ನಾಳೆಯಿಂದ ಚಂದನ ಟಿವಿಯಲ್ಲಿ ಪಾಠ!
77ರ ವೃದ್ಧ ಸೇರಿದಂತೆ 8 ಮಂದಿಯಿಂದ ಬಾಲಕಿಯ ಮೇಲೆ ಅತ್ಯಾಚಾರ
ಶಿವರಾಜ್ ಕುಮಾರ್ ಪಾದಯಾತ್ರೆಗೆ ಹೋಗದಿರುವುದು ನನಗೆ ತುಂಬಾ ಸಂತೋಷವಾಗಿದೆ | ಸಚಿವ ಈಶ್ವರಪ್ಪ