ಲೋನ್ ಬೇಕಾದ್ರೆ ಲೈಂಗಿಕ ಆಸೆ ತೀರಿಸ್ಬೇಕು: ವಿಡಿಯೋ ವೈರಲ್ ಬಳಿಕ ಬಯಲಾಯ್ತು ಬ್ಯಾಂಕ್ ಮ್ಯಾನೇಜರ್ ನ ಅಸಲಿ ಮುಖ - Mahanayaka

ಲೋನ್ ಬೇಕಾದ್ರೆ ಲೈಂಗಿಕ ಆಸೆ ತೀರಿಸ್ಬೇಕು: ವಿಡಿಯೋ ವೈರಲ್ ಬಳಿಕ ಬಯಲಾಯ್ತು ಬ್ಯಾಂಕ್ ಮ್ಯಾನೇಜರ್ ನ ಅಸಲಿ ಮುಖ

bank manager
04/07/2021

ವಿಜಯವಾಡ: ಬ್ಯಾಂಕ್  ಮ್ಯಾನೇಜರ್ ಓರ್ವ ತನ್ನ ಸಹೋದ್ಯೋಗಿಗಳು ಮಾತ್ರವಲ್ಲದೇ, ಬ್ಯಾಂಕ್ ಗೆ ಬರುವ ಮಹಿಳಾ ಗ್ರಾಹಕಿಯರನ್ನೂ ಲೈಂಗಿಕವಾಗಿ ಬಳಸಿಕೊಂಡಿರುವ ಘಟನೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾದ ಬಳಿಕ ಈತನ ಒಂದೊಂದೇ ಕೃತ್ಯ ಬಯಲಾಗಿದೆ.


Provided by

ಆಂಧ್ರಪ್ರದೇಶದ ಬ್ಯಾಂಕೊಂದರ ಮ್ಯಾನೇಜರ್ ನಾಗೇಶ್ ಪೊದಲಕುರ್ ಈ ಕೃತ್ಯ ನಡೆಸಿದ ಆರೋಪವನ್ನು ಎದುರಿಸುತ್ತಿದ್ದು,  ಲೋನ್ ಬೇಕಾದರೆ,  ಅದಕ್ಕೆ ಪ್ರತಿಯಾಗಿ ತನ್ನ ಲೈಂಗಿಕ ಬಯಕೆ ಪೂರೈಸಬೇಕು ಎಂದು ಆತ ಮಹಿಳೆಯರಿಗೆ ಆಮಿಷವೊಡ್ಡುತ್ತಿದ್ದು, ಹಲವು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಬ್ಯಾಂಕ್ ನ ನೆಲ್ಲೂರು ಜಿಲ್ಲೆಯ ಪೊದಲಕುರ್ ಶಾಖೆಯಲ್ಲಿ ಈ ರೀತಿಯ ಕೃತ್ಯವನ್ನು ಆರೋಪಿ ನಡೆಸುತ್ತಿದ್ದ. ಈತನ ಕಿರುಕುಳ ಸಹಿಸಲಾಗದೇ ಹಲವು ಮಹಿಳಾ ಸಹೋದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರೆ ಎನ್ನುವ ಅಂಶಗಳು ಇದೀಗ ತಿಳಿದು ಬಂದಿದೆ.

ಇತ್ತೀಚೆಗೆ ಬ್ಯಾಂಕ್ ನ ಸಿಸಿ ಕ್ಯಾಮರದಲ್ಲಿ  ಮ್ಯಾನೇಜರ್ ನ ದುಷ್ಕೃತ್ಯ ಸೆರೆಯಾಗಿತ್ತು. ಮಹಿಳೆಯೊಬ್ಬರನ್ನು ತನ್ನ ಕಚೇರಿಯಲ್ಲಿಯೇ ಅನುಚಿವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬಳಿ ಆರೋಪಿ ನಾಗೇಶ್ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ