ಅಮಾನವೀಯ ಘಟನೆ: ರಾತ್ರೋ ರಾತ್ರಿ ಮನೆಯಲ್ಲಿದ್ದವರನ್ನ ಹೊರದಬ್ಬಿ ಬೀಗ ಜಡಿದ ಬ್ಯಾಂಕ್ ಸಿಬ್ಬಂದಿ!

ಸಾಂದರ್ಭಿಕ ಚಿತ್ರ
ತುಮಕೂರು: ಲೋನ್ ಕಟ್ಟಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ರಾತ್ರೋ ರಾತ್ರಿ ಮನೆಗಳಿಗೆ ಬೀಗ ಜಡಿದು ಸೀಜ್ ಮಾಡಿರುವ ಘಟನೆ ಇಲ್ಲಿನ ಬನಶಂಕರಿ ನಗರದಲ್ಲಿ ನಡೆದಿದ್ದು, ಬಾಡಿಗೆ ಮನೆಯಲ್ಲಿದ್ದವರನ್ನು ಕೂಡ ಮನೆಯಿಂದ ಹೊರಗೆ ಹಾಕಿ ಬೀಗ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕೆನರಾ ಬ್ಯಾಂಕ್ ಹಾಗೂ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಮನೆ ಮಾಲಿಕರು ಸೇರಿದಂತೆ ಬಾಡಿಗೆ ಮನೆಯಲ್ಲಿದ್ದವರನ್ನು ಕೂಡ ಮನೆಯಿಂದ ಹೊರಗೆ ಹಾಕಲಾಗಿದ್ದು, ಇದರಿಂದಾಗಿ ಮನೆಯಲ್ಲಿದ್ದವರು ಜೋರು ಮಳೆಯ ಮಧ್ಯೆ ಬೀದಿ ಬದಿಯಲ್ಲಿ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು ಎಂದು ವರದಿಯಾಗಿದೆ.
ಹಣ ಕಟ್ಟಲು ಬ್ಯಾಂಕ್ ಗೆ ಹೋಗಿದ್ದರೂ, ಬ್ಯಾಂಕ್ ನವರು ಹಣ ಕಟ್ಟಿಸಿಕೊಳ್ಳದೇ ಉದ್ದೇಶ ಪೂರ್ವಕವಾಗಿ ಮನೆಯನ್ನು ಸೀಜ್ ಮಾಡಿದ್ದಾರೆ ಎಂದು ಮನೆ ಮಾಲಿಕರು ಆರೋಪಿಸಿದ್ದಾರೆ. ಮಕ್ಕಳು, ಮಹಿಳೆಯರು ವೃದ್ಧರು, ಅನಾರೋಗ್ಯ ಪೀಡಿತರು ಎಂದೂ ನೋಡದೇ ರಾತ್ರಿ ವೇಳೆಯಲ್ಲಿ ಎಲ್ಲರನ್ನೂ ಹೊರದಬ್ಬಿ ಮನೆಯನ್ನು ಸೀಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಬ್ಯಾಂಕ್ ಸಿಬ್ಬಂದಿಯ ಅಮಾನವೀಯ ಕಾರ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರಾತ್ರಿ ವೇಳೆಯಲ್ಲಿ ಈ ರೀತಿಯ ಕೃತ್ಯವನ್ನು ನಡೆಸುವ ಮೂಲಕ ಅಮಾನವೀಯತೆ ಮೆರೆಯಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್: LPG ಸಿಲಿಂಡರ್ ಗೆ 15 ರೂಪಾಯಿ ಏರಿಕೆ
ಆರೆಸ್ಸೆಸ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಅಜ್ಞಾನ, ಭೀತಿ, ವೈಯಕ್ತಿಕ ಹತಾಶೆಯಾಗಿದೆ | ಬಿ.ವೈ.ವಿಜಯೇಂದ್ರ ಕಿಡಿ
ಮಾಟ ಮಂತ್ರದಿಂದ ನೆಮ್ಮದಿ ಪಡೆಯಲು ಹೋಗಿ 4.41 ಕೋಟಿ ರೂಪಾಯಿ ಕಳೆದುಕೊಂಡ ಮಹಿಳೆ
ಟಿಎಂಸಿ ಸೇರ್ಪಡೆಗೂ ಮುನ್ನ ಕೇಶಮುಂಡನ ಮಾಡಿ ಆತ್ಮಶುದ್ಧಿ ಮಾಡಿಕೊಂಡ ಬಿಜೆಪಿ ಶಾಸಕ!
ಸಾವಿನ ಕೊನೆಯ ಕ್ಷಣದಲ್ಲಿ “ಅಪ್ಪಾ ಬೇಗ ಬನ್ನಿ” ಎಂದು ಮಗ ಹೇಳಿದ್ದ | ಮಗನ ಸಾವು ನೆನೆದು ಬಿಕ್ಕಿಬಿಕ್ಕಿ ಅತ್ತ ರೈತ
75 ಯುವತಿಯರನ್ನು ಮದುವೆಯಾಗಿ, 200 ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡಿದ ಪಾಪಿ ಅರೆಸ್ಟ್!