ಚೀನಾವನ್ನು ಮತ್ತೆ ನಡುಗಿಸಿದ ಕೊರೊನಾ: ಒಂದೇ ದಿನ 5 ಸಾವಿರಕ್ಕೂ ಹೆಚ್ಚು ಕೇಸ್!

ಬೀಜಿಂಗ್: ಚೀನಾದಲ್ಲಿ ಕಳೆದ 24ಗಂಟೆಯಲ್ಲಿ 5,280 ಕೊರೊನಾದ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಎರಡು ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು ಕೇಸ್ಗಳು ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ (NHC) ತಿಳಿಸಿದೆ.
ಚೀನಾದಾದ್ಯಂತ ಕಳೆದ ದಿನಗಳಿಂದ ಒಂದೊಂದೇ ಪ್ರ್ಯಾಂತ್ಯಗಳು ಲಾಕ್ ಆಗುತ್ತಿವೆ. ಸುಮಾರು 24 ಮಿಲಿಯನ್ ಜನರು ಇರುವ ಜಿಲಿನ್ ಪ್ರಾಂತ್ಯವನ್ನು ಸೀಲ್ಡೌನ್ ಮಾಡಲಾಗಿದೆ. 2019ರಲ್ಲಿ ಮೊಟ್ಟಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಾಗ 2020ರಲ್ಲಿ ಹುಬೈ ಮತ್ತು ವುಹಾನ್ಗಳನ್ನು ಲಾಕ್ಡೌನ್ ಮಾಡಲಾಗಿತ್ತು. ಅದಾದ ಮೇಲೆ ಕ್ರಮೇಣ ಚೀನಾದಲ್ಲಿ ಕೊರೊನಾ ಕೇಸ್ಗಳಲ್ಲಿ ಇಳಿಕೆಯಾಗುತ್ತ ಬಂದಿತ್ತು.
ಇದೀಗ ಚೀನಾದ ಈಶಾನ್ಯ ಪ್ರಾಂತ್ಯ ವಾದ ಜಿಲಿನ್ ನಲ್ಲಿ 3,000ಕ್ಕೂ ಹೆಚ್ಚು ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಚೀನಾದ ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾದ ಶೆನ್ ಝೆನ್ನ್ನು ಲಾಕ್ ಡೌನ್ ಮಾಡಲಾಗಿದೆ.
ಇಲ್ಲಿ ಸುಮಾರು 17.5 ಮಿಲಿಯನ್ ಜನರಿದ್ದಾರೆ. ಇಲ್ಲೀಗ ಸದ್ಯ ಒಂದುವಾರದ ಲಾಕ್ ಡೌನ್ ಹೇರಲಾಗಿದ್ದು, ಅದಾದ ಬಳಿಕ ಕೊರೊನಾ ಕೇಸ್ ಗಳ ಸಂಖ್ಯೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ.
ಪೂರ್ವದಲ್ಲಿರುವ ಶಾಂಘೈ,ದಕ್ಷಿಣದಲ್ಲಿರುವ ಶೆನ್ಝೆನ್ ಬೀಜಿಂಗ್ನ ಹಲವು ನಗರಗಳು ಸೇರಿ ಅನೇಕ ಕಡೆ ಕೊರೊನಾ ಉತ್ತುಂಗಕ್ಕೇರುತಿತ್ತು ಚೀನಾ ಸರ್ಕಾರ, ಹಾಗೂ ಸ್ಥಳೀಯ ಅಧಿಕಾರಿಗಳು ಹಲವು ಕ್ರಮಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ತರಲು ಮುಂದಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇನ್ಸ್ಟಾಗ್ರಾಮ್ ಬಳಸದಂತೆ ಆದೇಶ : ರಷ್ಯಾ ಸರ್ಕಾರ
ಹಿಜಾಬ್ ವಿಚಾರ: ಹೈಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು; ಸಿಎಂ ಬಸವರಾಜ ಬೊಮ್ಮಾಯಿ
ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್
ವಿಪರೀತ ಶಾಖದಲ್ಲಿ ದೇಹವನ್ನು ತಂಪಾಗಿಸಲು ಏನು ಕುಡಿಯಬೇಕು? ಏನು ತಪ್ಪಿಸಬೇಕು?
ಉತ್ತರ ಪ್ರದೇಶದಲ್ಲಿ ಹಿಂಸಾಚಾರ: ಕಕ್ರಾಲಾ ಪ್ರದೇಶದಲ್ಲಿ ಹಲ್ಲೆ, ಗುಂಡಿನ ದಾಳಿ