ಶಾಕಿಂಗ್ ನ್ಯೂಸ್: ಲಾಕ್ ಡೌನ್ ನಡುವೆಯೇ ಹೆಣ್ಣು ಮಕ್ಕಳ ಕಳ್ಳ ಸಾಗಣೆ

16/05/2021
ಮಲ್ಕಂಗಿರಿ: ಕೊರೊನಾ ನಿಯಂತ್ರಣಕ್ಕೆ ಒಂದೆಡೆ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ಲಾಕ್ ಡೌನ್ ನಡುವೆಯೇ ಹೆಣ್ಣು ಮಕ್ಕಳ ಕಳ್ಳ ಸಾಗಣೆ ಪ್ರಕರಣವೊಂದು ಬಯಲಿಗೆ ಬಂದಿದೆ.
ಒಡಿಶಾದ ಭೈರಾಪುತ್ರ ವಲಯದ ಕುಡುಮುಲುಗುಮ್ಮ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಮಲ್ಕಂಗಿ ತಹಶೀಲ್ದಾರ್ ವಿಜಯ್ ಮಂದಾಂಗಿ ಲಾಕ್ ಡೌನ್ ಪರಿಶೀಲನೆ ನಡೆಸುತ್ತಿದ್ದ ವೇಳೆ ವಾಹನವೊಂದರಲ್ಲಿ ಹೆಣ್ಣು ಮಕ್ಕಳು ಕುಳಿತುಕೊಂಡಿರುವುದನ್ನು ನೋಡಿ ಅನುಮಾನಗೊಂಡು ಪ್ರಶ್ನಿಸಿದ್ದಾರೆ.
ಈ ವೇಳೆ ವಾಹನದಲ್ಲಿದ್ದ ಹೆಣ್ಣು ಮಕ್ಕಳು ಮಾತನಾಡಲು ಹಿಂಜರಿದಿದ್ದಾರೆ. ತಕ್ಷಣವೇ ತಹಶೀಲ್ದಾರ್ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದು, ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಮಕ್ಕಳನ್ನು ರಕ್ಷಿಸಿದ್ದಾರೆ.
ಇನ್ನೂ ಮಕ್ಕಳಿಗೆ ಧೈರ್ಯ ತುಂಬಿ ಪ್ರಶ್ನಿಸಿದ ವೇಳೆ, ತಮ್ಮನ್ನು ಆಂಧ್ರಪ್ರದೇಶಕ್ಕೆ ಕದ್ದು ಸಾಗಿಸಲಾಗುತ್ತಿದೆ. ವಲಸೆ ಕಾರ್ಮಿಕರ ಹೆಸರಿನಲ್ಲಿ ನಮ್ಮನ್ನು ಸಾಗಿಸಲು ಪ್ಲಾನ್ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ