ಲಾಕ್ ಡೌನ್ ನಿಂದಾಗಿ ಅಡುಗೆ ಭಟ್ಟ ದರೋಡೆಕೋರನಾದ!
ಚಂಡೀಗಡ: ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದಾತ, ಇದೀಗ ದರೋಡೆಕೋರನಾಗಿದ್ದು, ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
31 ವರ್ಷ ವಯಸ್ಸಿನ ಕೈಲಾಶ್ ಭಟ್ ಬಂಧಿತ ಆರೋಪಿಯಾಗಿದ್ದಾನೆ. ಈತ 98 ವರ್ಷ ವಯಸ್ಸಿನ ವೃದ್ಧೆ ಜೋಗಿಂದರ್ ಕೌರ್ ಎಂಬವರನ್ನು ಹತ್ಯೆ ಮಾಡಿರು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಈ ಪ್ರಕರಣದ ತನಿಖೆಯ ವೇಳೆ ಕೈಲಾಶ್ ಭಟ್ ವೃದ್ಧೆಯನ್ನು ಹತ್ಯೆ ಮಾಡಿರುವುರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದ ವೇಳೆ ಕೈಲಾಸ್ ಭಟ್ ಕೆಲಸ ಕಳೆದುಕೊಂಡಿದ್ದ. ಇದಾದ ಬಳಿಕ ವೃದ್ಧೆ ಜೋಗಿಂದರ್ ಕೌರ್ ಬಳಿ ಬೆಲೆಬಾಳುವ ವಸ್ತುಗಳಿವೆ ಎನ್ನುವುದನ್ನು ತಿಳಿದ ಆತ ಅದನ್ನು ದೋಚಲು ಆಗಸ್ಟ್ 6 ತೆರಳಿದ್ದ. ದರೋಡೆ ನಡೆಸುತ್ತಿದ್ದ ವೇಳೆ ಎಚ್ಚೆತ್ತುಕೊಂಡ ವೃದ್ಧೆ ಕೈಲಾಶ್ ಭಟ್ ನನ್ನು ತಡೆದು ಗಲಾಟೆ ಮಾಡಿದ್ದಳು ಈ ವೇಳೆ ಸಿಕ್ಕಿ ಬೀಳುವ ಭಯದಿಂದ ವೃದ್ಧೆಯನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ಜೋಗಿಂದರ್ ಕೌರ್ ಒಂಟಿಯಾಗಿ ವಾಸಿಸುತ್ತಿದ್ದರು. ದರೋಡೆ ಯತ್ನದ ವೇಳೆ ಆಕೆಯ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಲಾಗಿತ್ತು. ಆದರೆ ಮನೆಯಲ್ಲಿ ಬೆಲೆಬಾಳುವ ಯಾವುದೇ ವಸ್ತುಗಳು ಕಾಣೆಯಾಗಿರಲಿಲ್ಲ. ಕೆಲಸದವರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಸಂಬಂಧ ಇಲ್ಲಿನ ಸೆಕ್ಟರ್-3 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಕೈಲಾಶ್ ಭಟ್ ನ ಕೃತ್ಯ ಬೆಳಕಿಗೆ ಬಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ಉತ್ತರಾಖಂಡ್ ನ ಅಲ್ಮೋರಾದಿಂದ ಬಂದಿದ್ದ ಆರೋಪಿ ಭಟ್ ಸೆಕ್ಟರ್-15ರ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಸಿಂಗ್ ಚಹಲ್ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ: ಇನ್ನೆರಡು ದಿನ ಏನೇನು ಇರಲಿದೆ?
ಜಿಯೋ ಫೋನ್ ಸ್ಫೋಟ: ಪ್ಯಾಂಟ್ ನ ಜೇಬಿನಲ್ಲಿದ್ದಾಗಲೇ ಏಕಾಏಕಿ ಸಿಡಿದ ಮೊಬೈಲ್
ಸಹೋದರನೇ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾನೆ: ಪೊಲೀಸರ ಮೊರೆ ಹೋದ ಯುವತಿ
ಇಳೆಯದಳಪತಿ ನಟ ವಿಜಯ್-ಎಂ.ಎಸ್.ಧೋನಿ ಭೇಟಿ | ಕಾರಣ ಏನು ಗೊತ್ತಾ?
ಕೇವಲ 11 ನಿಮಿಷ ಮಾತ್ರ ರೇಪ್ ಆಗಿದೆ ಎಂದು ಶಿಕ್ಷೆ ಕಡಿಮೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶ!