ಲಾಕ್ ಡೌನ್ ಒಂದು ವಾರಗಳ ಕಾಲ ಮುಂದುವರಿಕೆ |  ವಿಶೇಷ ಪ್ಯಾಕೇಜ್ ಯಾರಿಗೆಲ್ಲ ಸಿಗಲಿದೆ?

lockdown
03/06/2021

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಿಳಿಸಿದ್ದು, ಲಾಕ್ ಡೌನ್ ಸಂದರ್ಭದಲ್ಲಿ  ಇನ್ನಷ್ಟು ವರ್ಗಗಳಿಗೆ ಪ್ಯಾಕೇಜ್ ಘೋಷಿಸಿದ್ದಾರೆ.

ಕೊರೊನಾ ತಡೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ಅವಧಿ ವಿಸ್ತರಣೆ ಹಾಗೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರದ 2ನೇ ವಿಶೇಷ ಪ್ಯಾಕೇಜ್ ಘೋಷಣೆಯ ಹಿನ್ನೆಲೆಯಲ್ಲಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು.

ಚಲನ ಚಿತ್ರ ಕಲಾವಿದರಿಗೆ 3 ಸಾವಿರ, ಅಡುಗೆ ಭಟ್ಟರಿಗೆ 3 ಸಾವಿರ,  ಶಾಲಾ ಮಕ್ಕಳಿಗೆ ಜೂನ್, ಜುಲೈನಲ್ಲಿ  ಹಾಲಿನ ಪುಡಿ, ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ವಿನಾಯಿತಿ, ಕೈಮಗ್ಗ ಕಾರ್ಮಿಕರಿಗೆ  3 ಸಾವಿರ , ಆಶಾಕಾರ್ಯಕರ್ತೆಯರು 3 ಸಾವಿರ  ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ನೆರವು, ಮೀನುಗಾರರಿಗೆ 3 ಸಾವಿರ ನೆರವು ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version