ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಗುತ್ತಿಗೆದಾರ! - Mahanayaka
1:14 PM Thursday 12 - December 2024

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಗುತ್ತಿಗೆದಾರ!

guttigedara
28/04/2022

ಬಾಳೆಹೊನ್ನೂರು:  ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮಾಸುವ ಮೊದಲೇ ಮತ್ತೋರ್ವ ಗುತ್ತಿಗೆದಾರ ಬಾಳೆಹೊನ್ನೂರು ಪಟ್ಟಣದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿ ಮೂಲದ ಬಸವರಾಜ್(47) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಮೂರು ದಿನಗಳ ಹಿಂದೆ ಬಸವರಾಜ್ ಕೊಠಡಿ ಪಡೆದುಕೊಂಡಿದ್ದರು. ಬುಧವಾರ ಬೆಳಗ್ಗೆ ಕೊಠಡಿಯಿಂದ ಹೊರ ಬಂದಿದ್ದ ಬಸವರಾಜ್ ಆ ಬಳಿಕ ಕೊಠಡಿ ಬಾಗಿಲು ತೆರೆದಿರಲಿಲ್ಲ.

ಬುಧವಾರ ಮಧ್ಯಾಹ್ನದವರೆಗೆ ಕೊಠಡಿ ಬಾಗಿಲು ತೆರೆಯದಿದ್ದುದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಠಡಿಯ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.  ಕುಟುಂಬಸ್ಥರು ಆಗಮಿಸಿದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬಹುದು ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಟಿಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ: ದಿನಾಂಕ ಪ್ರಕಟ

ವೈಲೆಂಟ್ ಆಗಿದ್ದ ಅಜಯ್ ದೇವಗನ್ ರನ್ನು ಸೈಲೆಂಟ್ ಮಾಡಿದ ಕಿಚ್ಚ ಸುದೀಪ್!

ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ಕಿಚ್ಚನ  ವಿರುದ್ಧ ಅಜಯ್ ದೇವಗನ್   ಕಿಡಿ

ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ :ನಟನ ವಿರುದ್ಧ ಕೇಸ್ 

ನಡು ರಸ್ತೆಯಲ್ಲಿ ಕೈಕೊಟ್ಟ ಇಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಇಟ್ಟ!

ಇತ್ತೀಚಿನ ಸುದ್ದಿ