ಲಾಡ್ಜ್ ನಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿ ಆತ್ಮಹತ್ಯೆ - Mahanayaka

ಲಾಡ್ಜ್ ನಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿ ಆತ್ಮಹತ್ಯೆ

murdeshwara
23/04/2021

ಮುರ್ಡೇಶ್ವರ: ಪುಣೆಯಿಂದ ಊರಿಗೆ ಮರಳಿದ್ದ ವ್ಯಕ್ತಿಯೋರ್ವ ಲಾಡ್ಜ್ ವೊಂದರಲ್ಲಿ ಕ್ವಾರಂಟೈನ್ ಆಗಿದ್ದು, ಇದೀಗ ಲಾಡ್ಜ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಮುರ್ಡೇಶ್ವರದಲ್ಲಿ ನಡೆದಿದೆ.

ಭಟ್ಕಳ ತಾಲೂಕಿನ ಬೆಂಗ್ರೆ ನಿವಾಸಿ 28 ವರ್ಷ ವಯಸ್ಸಿನ ವೆಂಕಟೇಶ್ ಸುಕ್ರಯ್ಯ ದೇವಾಡಿಗ ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದು, 13 ವರ್ಷಗಳಿಂದ ಪುಣೆಯ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಊರಿಗೆ ಬಂದಿದ್ದು, ಕೊವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಆಗಿದ್ದ.

ಊರಿನಲ್ಲಿ ಏನಾದರೂ ಕಾರ್ಯಕ್ರಮವಿದ್ದರೆ ಮಾತ್ರವೇ ಬರುತ್ತಿದ್ದ ಸುಕ್ರಯ್ಯ, 5-6 ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ. ಪೆಟ್ರಿಶಿಯಾ ಲಾಡ್ಜ್ ನಲ್ಲಿ ರೂಮ್ ಪಡೆದುಕೊಂಡಿದ್ದ ಈತ ಯಾವುದೋ ವಿಷಯವನ್ನು ತಲೆಗೆ ಹಚ್ಚಿಕೊಂಡಿದ್ದ ಎಂದು ಹೇಳಲಾಗಿದೆ.


Provided by

ರಾತ್ರಿ ವೇಳೆ ಲಾಡ್ಜ್ ನ ಕಿಟಕಿಗೆ ಟವೆಲ್ ಕಟ್ಟಿ ನೇಣು ಬಿಗಿದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಮೃತನ ಸಹೋದರ ಗಣಪತಿ ಸುಕ್ರಯ್ಯ ದೇವಾಡಿಗ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ