ಕೊನೆಯ ಹಂತದ ಚುನಾವಣೆ: ಪಶ್ಚಿಮ ಬಂಗಾಳದ ಹಲವೆಡೆ ಹಿಂಸಾತ್ಮಕ ಘಟನೆ - Mahanayaka

ಕೊನೆಯ ಹಂತದ ಚುನಾವಣೆ: ಪಶ್ಚಿಮ ಬಂಗಾಳದ ಹಲವೆಡೆ ಹಿಂಸಾತ್ಮಕ ಘಟನೆ

01/06/2024

ಇಂದು ನಡೆದ ಏಳನೇ ಮತ್ತು ಕೊನೆಯ ಹಂತದ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ ಹಲವೆಡೆ ಹಿಂಸಾತ್ಮಕ ಘಟನೆಗಳು ನಡೆದಿವೆ. ಜಾಧವಪುರ ಕ್ಷೇತ್ರದಲ್ಲಿ ಪಕ್ಷ ಕಾರ್ಯಕರ್ತರ ನಡುವೆ ಸಂಘರ್ಷಗಳ ವೇಳೆ ಕಚ್ಚಾ ಬಾಂಬ್‌ ಗಳನ್ನು ಎಸೆಯಲಾಗಿದ್ದರೆ, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮೀಸಲು ಇವಿಎಂ ಒಂದನ್ನು ಗುಂಪೊಂದು ನೀರಿಗೆಸೆದಿದೆ.

ಜಾದವಪುರ ಕ್ಷೇತ್ರದ ಭಾಂಗರ್‌ ಎಂಬಲ್ಲಿ ಟಿಎಂಸಿ ಮತ್ತು ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರತ್ತ ಕಚ್ಚಾ ಬಾಂಬ್‌ ಎಸೆದಿದ್ದಾರೆ. ಪೊಲೀಸರು ಗುಂಪನ್ನು ಚದುರಿಸಲು ಲಾಠಿಪ್ರಹಾರ ನಡೆಸಬೇಕಾಯಿತು. ಸ್ಥಳದಿಂದ ಕೆಲ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿ ಎಂಬಲ್ಲಿ ಬೂತ್‌ ಸಂಖ್ಯೆ 40 ಮತ್ತು 41 ರಲ್ಲಿ ಒಂದು ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ಗುಂಪೊಂದು ನೀರಿಗೆಸೆದಿದೆ. ಇವು ಮೀಸಲು ಯಂತ್ರಗಳಾಗಿದ್ದವು ಎಂದು ಚುನಾವಣಾ ಆಯೋಗ ಹೇಳಿದೆ.


Provided by

ಸಂದೇಶಖಾಲಿಯ ಬರ್ಮಜೂರ್‌ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಪೊಲೀಸರು ಶುಕ್ರವಾರ ರಾತ್ರಿ ಪೋಲಿಂಗ್‌ ಏಜಂಟರ ಮನೆಗಳಿಗೆ ತೆರಳಿ ಅವರನ್ನು ಬೆದರಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ. ಬೆದರಿಕೆಯ ತಂತ್ರದ ವಿರುದ್ಧ ಸಂದೇಶಖಾಲಿ ಮಹಿಳೆಯರು ಮತ್ತೆ ಪ್ರತಿಭಟಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ