ಅಚ್ಚರಿ: 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಯ ಮೃತದೇಹ ಪತ್ತೆ..! - Mahanayaka

ಅಚ್ಚರಿ: 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಯ ಮೃತದೇಹ ಪತ್ತೆ..!

02/08/2023

37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಯ ಮೃತದೇಹ ಪತ್ತೆಯಾದ ಘಟನೆ ಸ್ವಿಝರ್‌ಲ್ಯಾಂಡಿನ ಸ್ವಿಸ್ ಆಲ್ಪ್ಸ್‌ ಕಣಿವೆಯಲ್ಲಿ ನಡೆದಿದೆ. ಹಿಮನದಿ ಕರಗುತ್ತಿರುವುದರಿಂದ ಮೃತದೇಹವು ಹೊರಕ್ಕೆ ಬಂದಿದೆ.


Provided by

ಪರ್ವತ ಏರುತ್ತಿದ್ದ ಪರ್ವತಾರೋಹಿಗಳ ಗುಂಪಿನ ಕಣ್ಣಿಗೆ ಈ ಮೃತದೇಹವು ಕಾಣಿಸಿಕೊಂಡಿದೆ. ಈ ಮೃತದೇಹದ ಡಿಎನ್ಎ ಪರೀಕ್ಷೆಯಲ್ಲಿ 1986ರಲ್ಲಿ ಕಾಣೆಯಾದ 38 ವರ್ಷದ ಪರ್ವತಾರೋಹಿಯ ಮೃತದೇಹ ಎಂದು ಪತ್ತೆಯಾಗಿದೆ.

1986 ರ ಸೆಪ್ಟೆಂಬರ್ ನಲ್ಲಿ ಪರ್ವತ ಏರಿದ್ದ 38 ವರ್ಷ ವಯಸ್ಸಿನ ಜರ್ಮನ್ ಪರ್ವತಾರೋಹಿ ನಂತರ ಹಿಂತಿರುಗಿರಲಿಲ್ಲ. ಆ ಬಳಿಕ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯ ಗುರುತು ಅಥವಾ ಸಾವಿನ ಬಗ್ಗೆ ಹೆಚ್ಚಿನ ವಿವರಗಳನ್ನು ಪೊಲೀಸರು ನೀಡಿಲ್ಲ.


Provided by

ಹಿಮನದಿಗಳು ಕರಗುತ್ತಿರುವುದರಿಂದ ದಶಕಗಳ ಹಿಂದೆ ಕಳೆದು ಹೋದ ಆರೋಹಿಗಳು ಅಥವಾ ವಸ್ತುಗಳು ಹೊರಕ್ಕೆ ಬರುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷವಷ್ಟೇ 1968 ರಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಹಿಮನದಿಯಲ್ಲಿ ಪತ್ತೆಯಾಗಿದ್ದವು. ಅದಕ್ಕೂ ಮುನ್ನ 2015 ರಲ್ಲಿ, 1970 ರ ಹಿಮಬಿರುಗಾಳಿಯಲ್ಲಿ ಕಾಣೆಯಾದ ಇಬ್ಬರು ಯುವ ಜಪಾನಿನ ಆರೋಹಿಗಳ ಮೃತದೇಹಗಳು ಕಂಡುಬಂದಿತ್ತು. 2014 ರಲ್ಲಿ 1979 ರಲ್ಲಿ ಕಾಣೆಯಾದ ಬ್ರಿಟಿಷ್ ಪರ್ವತಾರೋಹಿಯ ಮೃತದೇಹ ಪತ್ತೆಯಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ