ಭಾರತ ನೋಡಿ ಎಷ್ಟು ಕೊಳಕಾಗಿದೆ | ಭಾರತದ ಗಾಳಿಯಂತೂ ಹೊಲಸು | ಭಾರತದ ಬಗ್ಗೆ ಟ್ರಂಪ್ ಬಳಸಿದ ಭಾಷೆ ನೋಡಿ

23/10/2020

ಅಮೆರಿಕ: ಭಾರತಕ್ಕೆ ಇಲ್ಲಿಯವರೆಗೆ ಯಾರೂ ಬಳಸದೇ ಇರುವಂತಹ ನಿಕೃಷ್ಟ ಭಾಷೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸಿದ್ದು, ಭಾರತದ ಗಾಳಿಯ ಗುಣಮಟ್ಟವನ್ನು ವಿವರಿಸುತ್ತಾ, ‘ಹೊಲಸು’ ಎಂಬ ಪದವನ್ನು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

“ಭಾರತವನ್ನು ನೋಡಿ ಎಷ್ಟು ಕೊಳಕಾಗಿದೆ” ಎಂದು ಹೇಳಿದ ಟ್ರಂಪ್, ತನ್ನ ಪ್ರತಿ ಸ್ಪರ್ಧಿ ಜೋ ಬಿಡೆನ್ ಅವರ ಜೊತೆಗಿನ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನ ಮತ್ತು ತಮ್ಮ ಅಂತಿಮ ಭಾಷಣದ ವೇಳೆಯಲ್ಲಿ ಟ್ರಂಪ್ ಹೇಳಿದ್ದಾರೆ.

ಚೀನಾ, ರಷ್ಯಾದ ಗಾಳಿ ಹೊಲಸು, ಭಾರತದ ಗಾಳಿಯಂತೂ ತುಂಬಾ ಹೊಲಸು ಎಂದು ಹವಾಮಾನ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಾ ಅವರು ಭಾರತಕ್ಕೆ ಅವಮಾನ ಮಾಡಿದರು.

ಇಲ್ಲಿಯವರೆಗೆ ಭಾರತಕ್ಕೆ ಯಾವುದೇ ದೇಶದ ಅಧ್ಯಕ್ಷರೊಬ್ಬರು ಈ ಮಟ್ಟಕ್ಕೆ ಅವಮಾನ ಮಾಡಿಲ್ಲ. ಒಂದು ದೇಶದ ವಾತಾವರಣವನ್ನೇ ಹೊಲಸು ಎನ್ನುವ ಟ್ರಂಪ್, ಭಾರತ ದೇಶ ತುಂಬಾ ಕೊಳಕಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version