ಅಬ್ಬಬ್ಬಾ..! ನೋಡು ನೋಡುತ್ತಲೇ ಕುಸಿದು ಬಿದ್ದ ಮನೆ - Mahanayaka
12:57 PM Friday 13 - September 2024

ಅಬ್ಬಬ್ಬಾ..! ನೋಡು ನೋಡುತ್ತಲೇ ಕುಸಿದು ಬಿದ್ದ ಮನೆ

chikkamagaluru
18/07/2024

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕು ತ್ರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುತ್ತಿ ಗ್ರಾಮದ ಗಿರಿಜಮ್ಮ ಎಂಬವರ ಮನೆ ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅಡುಗೆ ಮನೆ ಕುಸಿದು ಬಿದ್ದು ಗಿರಿಜಮ್ಮ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾತ್ರಿ ಆಗಿದ್ದರಿಂದ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ. ಹಗಲಿನಲ್ಲಿ ಆಗಿದ್ದರೆ ದೊಡ್ಡ ದುರಂತ ಆಗುತ್ತಿತ್ತು ಎಂದು ಹೇಳಲಾಗಿದೆ.

ಮನೆಯ ಒಂದು ಭಾಗ ಕುಸಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ ಮನೆಯ ಒಂದು ಭಾಗ ಮೊದಲು ಕುಸಿದು ಬಿದ್ದಿದೆ. ನಂತರ ಹಂತ ಹಂತವಾಗಿ ಮನೆ ಕುಸಿದು ಬೀಳುವ ದೃಶ್ಯ ಸೆರೆಯಾಗಿದೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ