'ತಾನು ದೇವತೆ' ಎಂದು ಹೇಳಿ ತನ್ನಿಬ್ಬರು ಮಕ್ಕಳನ್ನೇ ಕೊಂದ ಅಮೆರಿಕದ ಮಹಿಳೆ: ಭಯ ಹುಟ್ಟಿಸುತ್ತೆ ಈಕೆಯ ವರ್ತನೆ..! - Mahanayaka
12:04 AM Monday 16 - December 2024

‘ತಾನು ದೇವತೆ’ ಎಂದು ಹೇಳಿ ತನ್ನಿಬ್ಬರು ಮಕ್ಕಳನ್ನೇ ಕೊಂದ ಅಮೆರಿಕದ ಮಹಿಳೆ: ಭಯ ಹುಟ್ಟಿಸುತ್ತೆ ಈಕೆಯ ವರ್ತನೆ..!

02/08/2023

ಇದನ್ನು ಏನೆನ್ನಬೇಕೋ ಗೊತ್ತಿಲ್ಲ. ಅತಿಯಾದ ಧರ್ಮ ನಿಷ್ಟೆ ಅನ್ನಬೇಕೋ ಅದೂ ಗೊತ್ತಿಲ್ಲ. ಹೌದು. ತನ್ನಿಬ್ಬರು ಮಕ್ಕಳನ್ನು ಕೊಂದು, ತನ್ನ ಗಂಡನ ಮಾಜಿ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಅಮೇರಿಕಾದ ಮಹಿಳೆಯೊಬ್ಬರಿಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಹಿಳೆ ‘ಡೂಮ್ಸ್ ಡೇ’ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದಳು ಎಂದು ವರದಿಯಾಗಿದೆ.

ಲೋರಿ ವ್ಯಾಲೋ ಎಂಬಾಕೆ ತನ್ನ 16 ವರ್ಷದ ಮಗಳು ಟೈಲೀ ರಿಯಾನ್ ಮತ್ತು ಏಳು ವರ್ಷದ ದತ್ತು ಮಗ ಜೋಶುವಾ ಜೆಜೆ ವ್ಯಾಲೋ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸಾಬೀತಾಗಿದೆ.
ಈಕೆ ತನ್ನನ್ನು ತಾನು ʼಯೇಸುಕ್ರಿಸ್ತ ಎರಡನೇ ಬಾರಿ ಭೂಮಿಗೆ ಬರಬೇಕು. ಇದಕ್ಕಾಗಿ ಮಾನವಕುಲವನ್ನು ಸಿದ್ಧಪಡಿಸುವ ಹೊಣೆ ಹೊತ್ತಿರುವ ದೇವತೆʼ ಎಂದು ಮಹಿಳೆ ಹೇಳಿಕೊಂಡಿದ್ದು, ತನಗೆ ದೇವತೆಗಳೊಂದಿಗೆ ಮಾತುಕತೆ ನಡೆಸಬಹುದೆಂದು ಆಕೆ ವಾದಿಸಿದ್ದಾಳೆ.

ಏಸುಕ್ರಿಸ್ತ ಮತ್ತೆ ಅವತಾರ ಎತ್ತಿ ಬರಬೇಕಾದರೆ ಭೂಮಿ ಮೇಲಿನ ದುಷ್ಟಶಕ್ತಿಗಳು ನಾಶವಾಗಬೇಕು ಎಂದು ನಂಬಿದ್ದ ಮಹಿಳೆ, ತನ್ನ ಮಕ್ಕಳೂ ಸಹ ದುಷ್ಟ ಶಕ್ತಿಗಳು ಎಂದು ಬಲವಾಗಿ ನಂಬಿದ್ದಳು. ಇದೇ ಕಾರಣಕ್ಕಾಗಿ ಮಕ್ಕಳನ್ನು ಕೊಂದ ಆಕೆ, ತಾನು ಮಾಡಿದ ಕೊಲೆಗಳನ್ನು ಸಮರ್ಥಿಸಲು ಧಾರ್ಮಿಕ ನಂಬಿಕೆಗಳನ್ನೇ ಸಬೂಬಾಗಿ ಬಳಸಿದ್ದಾಳೆ. ಆದರೆ, ಅವಳ ಕೃತ್ಯಗಳ ಹಿಂದೆ ಹಣಕಾಸಿನ ಉದ್ದೇಶಗಳಿವೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಆಕೆಯ ಐದನೇ ಪತಿ, ಚಾಡ್ ಡೇಬೆಲ್ ಕೂಡಾ ಇದೇ ಪ್ರಕರಣಗಳ ಮೇಲೆ ವಿಚಾರಣೆ ಎದುರಿಸುತ್ತಿದ್ದು, ಇದರಲ್ಲಿ ಆತನ ಮೊದಲ ಪತ್ನಿ ಟಮ್ಮಿಯ ಕೊಲೆ ಪ್ರಕರಣವೂ ಸೇರಿದೆ.

ವ್ಯಾಲೋ ಮಕ್ಕಳು ನಾಪತ್ತೆಯಾಗಿ ಹಲವು ದಿನಗಳು ಕಳೆದರೂ ಪ್ರಕರಣ ಬಹಿರಂಗಗೊಂಡಿರಲಿಲ್ಲ. 2019 ರ ಕೊನೆಯಲ್ಲಿ ಈ ಪ್ರಕರಣವು ಮಾಧ್ಯಮಗಳ ಗಮನ ಸೆಳೆಯಿತಾದರೂ, ಅವರ ಮೃತದೇಹಗಳು  ಜೂನ್ 2020 ರಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ವ್ಯಾಲೋ ಮತ್ತು ಡೇಬೆಲ್‌ನ  ಹಲವಾರು ಜನರ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತನಿಖೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ