ನೆಲ್ಯಾಡಿ: ಲಾರಿ ಚಾಲಕನ ಮೇಲೆ ಆನೆ ದಾಳಿ | ಚಾಲಕನ ದಾರುಣ ಸಾವು - Mahanayaka
4:25 PM Wednesday 11 - December 2024

ನೆಲ್ಯಾಡಿ: ಲಾರಿ ಚಾಲಕನ ಮೇಲೆ ಆನೆ ದಾಳಿ | ಚಾಲಕನ ದಾರುಣ ಸಾವು

26/02/2021

ನೆಲ್ಯಾಡಿ: ಲಾರಿ ಚಾಲಕನೋರ್ವನನ್ನು ಕಾಡಾನೆ ಭೀಕರವಾಗಿ ಕೊಂದು ಹಾಕಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿಯ ಶಿರಾಡಿ ಘಾಟ್ ನ ಕೆಂಪು ಹೊಳೆಯಲ್ಲಿ ನಡೆದಿದೆ.

ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ರಾಜಸ್ಥಾನ ಮೂಲದ ಲಾರಿ ಚಾಲಕ ಆನೆ ದಾಳಿಗೆ ಬಲಿಯಾದ ಚಾಲಕನಾಗಿದ್ದಾನೆ.  ಬೆಂಗಳೂರು ಕಡೆಗೆ  ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕ  ಕೆಂಪುಗಹೊಳೆ ಸಮೀಪ ಲಾರಿ ನಿಲ್ಲಿಸಿ, ಮೂತ್ರ ವಿಸರ್ಜನೆಗೆತೆರಳಿದ್ದಾನೆ. ಈ ವೇಳೆ ಏಕಾಏಕಿ ಆತನ ಮೇಲೆ ಆನೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಘಟನೆಯು ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದು, ಚಾಲಕನ ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ಕೆಂಪುಹೊಳೆ ಸಮೀಪ ಕಾಡಾನೆ ರಸ್ತೆಯಲ್ಲಿ ಓಡಾಡಿದ್ದು, ಇದರಿಂದಾಗಿ ವಾಹನ ಸಂಚಾರದಲ್ಲಿಯೂ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸಲು ವಾಹನ ಸವಾರರು ಹಿಂದೇಟು ಹಾಕುವಂತಾಗಿದೆ.

ಇತ್ತೀಚಿನ ಸುದ್ದಿ