ಕಬ್ಬು ತುಂಬಿದ ಲಾರಿಗೆ ವಿದ್ಯುತ್ ಸ್ಪರ್ಶ : ಇಬ್ಬರ ದುರ್ಮರಣ - Mahanayaka

ಕಬ್ಬು ತುಂಬಿದ ಲಾರಿಗೆ ವಿದ್ಯುತ್ ಸ್ಪರ್ಶ : ಇಬ್ಬರ ದುರ್ಮರಣ

chamarajanagara
09/09/2023

ಚಾಮರಾಜನಗರ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಲ್ ಡ್ಯಾಮ್ ರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಗರಪುರ ಗ್ರಾಮದ ನಿವಾಸಿಗಳಾದ ಲಾರಿ ಚಾಲಕ ಚಿನ್ನು ಮತ್ತು ಲಾರಿ ಮಾಲೀಕರಾದ ಪ್ರಕಾಶ್ ಎಂಬ ವ್ಯಕ್ತಿಗಳು ಮೃತ ದುರ್ದೈವಿಗಳು.

ಗುಂಡಾಲ್ ಡ್ಯಾಮ್ ಸಮೀಪದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಬ್ಬಿನ ಲೋಡ್ ತುಂಬಿಕೊಂಡು ಬರುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರ ರಸ್ತೆ ಬದಿಯಲ್ಲಿ ಹಾದುಹೋಗಿರುವ ಹೈ ಪವರ್ ವಿದ್ಯುತ್ ತಂತಿಯು ತಗುಲಿದೆ.

ಲಾರಿಗೆ ಕಬ್ಬನ್ನು ತುಂಬಿಕೊಂಡು ಬರುವಾಗ ರಸ್ತೆ ಬದಿಯಲ್ಲಿ ಹಾದುಹೋಗಿರುವ ಹೈ ಪವರ್ ವಿದ್ಯುತ್ ತಂತಿ ಸ್ಪರ್ಶಿಸಿದೆ. ಈ ವೇಳೆ ಲಾರಿ ಚಾಲಕ ಚಿನ್ನು ಮತ್ತು ಮಾಲೀಕರಾದ ಪ್ರಕಾಶ್ ಅವರು ಲಾರಿಯಿಂದ ಹೊರಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ . ಆದರೆ, ಹೆಚ್ಚಿನ ಹೈ ಪವರ್ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿ