ತಿರುವಿನಲ್ಲಿ ಸೋಲಾರ್ ಪ್ಲೇಟ್ ತುಂಬಿದ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಜಸ್ಟ್ ಮಿಸ್
11/08/2023
ಚಾಮರಾಜನಗರ: ತಿರುವಿನಲ್ಲಿ ಲೋಡ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಚಾಮರಾಜನಗರದ ಎಂಡಿ ಲಾಡ್ಜ್ ಬಳಿ ನಡೆದಿದೆ.
ಹರ್ಯಾಣ ಮೂಲದ ಲಾರಿ ಇದಾಗಿದ್ದು ಸೋಲಾರ್ ಪ್ಲೇಟ್ಸ್ ಗಳನ್ನು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ.
ಚಾಲಕ ಹಾಗೂ ಕ್ಲೀನರ್ ಹೊರಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಲಾರಿ ಪಲ್ಟಿಯಾಗಿದ್ದನ್ನು ಕಾಣಲು ಜನಜಾತ್ರೆ ಸೇರಿದ್ದರಿಂದ ಒಂದೂವರೆ ತಾಸಿಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.