ಅನಿರ್ದಿಷ್ಟಾವಧಿ ಮುಷ್ಕರ ಕೈ ಬಿಟ್ಟ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್
ಬೆಂಗಳೂರು: ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಗುರುವಾರ ಮಧ್ಯರಾತ್ರಿಯಿಂದ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಠಾವಧಿ ಮುಷ್ಕರ ಕೈ ಬಿಟ್ಟಿದೆ.
ಬೆಂಗಳೂರು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರ ಜತೆ ಗುರುವಾರ ಬೆಳಗಿನಿಂದ ಸಂಘದ ಪದಾಧಿಕಾರಿಗಳು ನಡೆಸಿದ ಮೂರನೇ ಸುತ್ತಿನ ಮಾತುಕತೆ ನಂತರ ಸಂಘದ ಅಧ್ಯಕ್ಷ ಜಿ.ಆರ್.ಷನ್ಮುಖಪ್ಪ ಈ ವಿಷಯ ಪ್ರಕಟಿಸಿದರು.
ಮಾತುಕತೆ ವೇಳೆ ಮಧ್ಯಮ ಮತ್ತು ಲಘು ಸರಕು ಸಾಗಣೆ ವಾಹನಗಳು ಏಳುವರೆ ಟನ್ ನಷ್ಟು ಸರಕು ಸಾಗಣೆಗೆ ಅವಕಾಶ ಕಲ್ಪಿಸಲು ವಿಶೇಷ ಆಯುಕ್ತ ಸಲೀಮ್ ಅವರು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದ ಆರಂಭಿಸಲು ಉದ್ದೇಶಿಸಿದ್ದ ಮುಷ್ಕರವನ್ನು ಕೈಬಿಡಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಆರ್.ಷನ್ಮುಖಪ್ಪ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರು ಟ್ರಕ್ಸ್ ಅಸೋಸಿಯೇಷನ್ ಅಧ್ಯಕ್ಷ ಮುರುಗನ್ ಮಾತನಾಡಿ, ನಗರದಲ್ಲಿ ಬೆಳಗ್ಗೆ 7ರಿಂದ 11 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ 9 ಗಂಟೆವರೆಗೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶ ತೆರವುಗೊಳಿಸಲು ಒಪ್ಪಿದೆ. ಈ ಸಂಬಂಧ ಪೊಲೀಸರಿಗೆ ವಿಶೇಷ ಸಂಚಾರಿ ಆಯುಕ್ತರು ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಮಾತುಕತೆಯಲ್ಲಿ ಸಂಘದ ಅಧ್ಯಕ್ಷ ಷನ್ಮುಖಪ್ಪ, ಪದಾಧಿಕಾರಿಗಳಾದ ಕೆ.ಎನ್.ಅಶ್ವತ್ಥ್, ರಾಜೇಶ್ ಗೌಡ ,ಮಧು ಕುಮಾರ್, ಬಿಸಿಟಿಎ ಅಧ್ಯಕ್ಷ ಮುರುಗನ್, ಮುಖಂಡರಾದ ಪಾಂಡೆ, ಮುನಿಕೃಷ್ಣ,ಸೆಂದಿಲ್ ಕುಮಾರ್, ರಾಮಸ್ವಾಮಿ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw