2 ದಶಕದ ಬಳಿಕ ಕಮಲ ಅರಳಿಸುವ ಸರ್ಕಸ್: ಚಾಮರಾಜನಗರಕ್ಕೆ ಅಭ್ಯರ್ಥಿ ಸೋಮಣ್ಣ!?

ಚಾಮರಾಜನಗರ: ಬರೋಬ್ಬರಿ 2 ದಶಕದ ಬಳಿಕ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಲೇ ಬೇಕೆಂದು ಪಣ ತೊಟ್ಟಿರುವ ಕಮಲಪಾಳೇಯ ಅಚ್ಚರಿ ಅಭ್ಯರ್ಥಿಯಾಗಿ ಸೋಮಣ್ಣ ಬರಬಹುದೆಂಬ ಮಾತುಗಳು ದಟ್ಟವಾಗಿದೆ.
ಹೌದು…, ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಸೋಮಣ್ಣ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಜೊತೆಗೆ, ಟಿಕೆಟ್ ಗಾಗಿ ಓಡಾಡುತ್ತಿದ್ದ ವಿಜಯೇಂದ್ರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದ ಹೊಸ ಟರ್ನಿಂಗ್ ಪಾಯಿಂಟಾಗಿದ್ದು ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ಎನ್ನುವ ಮಾತು ಸದ್ಯ ಇಲ್ಲವಾಗಿದೆ.
ಇನ್ನು, ಸೋಮಣ್ಣ ಅವರು ಕೂಡ ಸ್ಥಳೀಯರಲ್ಲ, ಟಿಕೆಟ್ ತಂದ ಬಳಿಕ ಹೇಗೆ ಎಲ್ಲರನ್ನೂ ಸಂಭಾಳಿಸುತ್ತಾರೆ ಎಂಬುದು ಕಾದು ನೋಡಬೇಕಿದ್ದು ಸೋಮಣ್ಣ ಹೆಸರಿನ ಜೊತೆ ರಾಮಚಂದ್ರು, ನಾಗಶ್ರೀ ಪ್ರತಾಪ್, ನೂರೊಂದು ಶೆಟ್ಟಿ, ಅಮ್ಮನಪುರ ಮಲ್ಲೇಶ್, ಆರ್.ಸುಂದರ್ ಹಾಗೂ ಡಾ.ಎ.ಆರ್.ಬಾಬು ಹೆಸರು ಪ್ರಸ್ತಾಪವಾಗಿದೆ.
ಹೊಸ ಜಾತಿ ಸಮೀಕರಣದ ಮೂಲಕ ತನಗೇ ಟಿಕೆಟ್ ಕೊಡಬೇಕೆಂದು ಸಾಕಷ್ಟು ಕಸರತ್ತು ನಡೆಸುತ್ತಿರುವ ವಾಲ್ಮೀಕಿ ಸಮುದಾಯದ ರಾಮಚಂದ್ರು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪ್ರಬಲ ನಾಯಕ ಸೋಮಣ್ಣ ಹಾಗೂ ಹೊಸ ಜಾತಿ ಸಮೀಕರಣ, ಸೌಮ್ಯ ಸ್ವಭಾವದ ರಾಮಚಂದ್ರು ಇವರಿಬ್ಬರಿಗೇ ಟಿಕೆಟ್ ಸಿಗಬಹುದು. ಇಲ್ಲವೇ, ಹಳೇ ಮೈಸೂರು ಟಾರ್ಗೆಟ್ ಮಾಡಿರುವ ಬಿಜೆಪಿ ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಕೊಟ್ಟು ಬೇರೆ ಕ್ಷೇತ್ರಗಳನ್ನೂ ಗೆಲ್ಲಿಸುವ ಗುರಿ ಕೊಡಬಹುದು ಎನ್ನಲಾಗಿದೆ.
ಬಹಿರಂಗವಾಗಿ ಸೋಮಣ್ಣ ತಾನು ಆಕಾಂಕ್ಷಿ, ಗಡಿಜಿಲ್ಲೆಯಲ್ಲಿ ಸ್ಪರ್ಧಿಸುವ ಇಂಗಿತ ಹೊರಹಾಕದಿದ್ದರೂ ತಮ್ಮ ಆಪ್ತ ಬಳಗದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ತಾನು ಸ್ಪರ್ಧೆ ಮಾಡುವ ಸಾಧಕ-ಬಾಧಕ ಚರ್ಚೆ ಮಾಡುತ್ತಿದುದು ಗುಟ್ಟಿನ ವಿಚಾರವೇನಲ್ಲ. ಆದ್ದರಿಂದ, ಹೈ ಕಮಾಂಡ್ ಟಾರ್ಗೆಟ್ ಒಪ್ಪಿ ಚಾಮರಾಜನಗರ ಅಭ್ಯರ್ಥಿಯಾಗಿ ಸೋಮಣ್ಣ ಆಗುವ ಸಾಧ್ಯತೆ ತೀರಾ ದಟ್ಟವಾಗಿದೆ.
1999ರಲ್ಲಿ ಗುರುಸ್ವಾಮಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಬಿಜೆಪಿ ಅರಳಿಸಿದ್ದರು. ಅದಾದ ಬಳಿಕ, ಕಮಲ ಅರಳಲು ಸಾಧ್ಯವಾಗಿಲ್ಲ. ಈಗ 23 ವರ್ಷದ ಬಳಿಕ ಬಿಜೆಪಿ ಅರಳಿಸಲು ಪ್ರಬಲ ನಾಯಕ ಸೋಮಣ್ಣ ಅವರನ್ನೇ ಕಣಕ್ಕಿಳಿಸಲು ಮುಂದಾಗಿದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw