ಲವ್ ಜಿಹಾದ್ ಜಾರಿಗೆ ಹಿಂದೇಟು ಹಾಕುತ್ತಿದೆಯೇ ರಾಜ್ಯ ಸರ್ಕಾರ? - Mahanayaka
11:15 PM Friday 13 - December 2024

ಲವ್ ಜಿಹಾದ್ ಜಾರಿಗೆ ಹಿಂದೇಟು ಹಾಕುತ್ತಿದೆಯೇ ರಾಜ್ಯ ಸರ್ಕಾರ?

03/02/2021

ಬೆಂಗಳೂರು:  ಲವ್ ಜಿಹಾದ್ ವಿರುದ್ಧದ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕಿದ್ದು,  ಉತ್ತರಪ್ರದೇಶ ಹಾಗೂ ಕರ್ನಾಟಕಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನುವುದು ವಾಸ್ತವ ಸ್ಥಿತಿ ಎನ್ನುವ ಅಭಿಪ್ರಾಯಗಳು ಪಕ್ಷದೊಳಗಿಂದಲೇ ಕೇಳಿ ಬಂದಿದೆ ಎಂದು ಹೇಳಲಾಗಿದೆ.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕೂಡ ಈ ಕಾಯ್ದೆಯನ್ನು ಮಂಡನೆ ಮಾಡುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಹೊಂದಿಲ್ಲ ಎಂದು ಹೇಳಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದ ಪರಿಸ್ಥಿತಿಗೂ ಇಲ್ಲಿನ ಸಾಮಾಜಿಕ ಪರಿಸರಕ್ಕೂ ವ್ಯತ್ಯಾಸ ಇದೆ. ಅಲ್ಲದೇ ಈ ಕಾಯ್ದೆಯನ್ನು ತರಬೇಕಾದರೆ, ಸಾಕಷ್ಟು ಪೂರ್ವ ತಯಾರಿಗಳು ಬೇಕು. ಆ ತಯಾರಿ ಇನ್ನೂ ಆಗಿಲ್ಲ.

ಸದ್ಯ ಬಿಜೆಪಿಯಲ್ಲಿ ಕೂಡ ಮುಸ್ಲಿಮ್ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ  ಪಕ್ಷದ ಜೊತೆಗೆ ನಿಂತಿರುವ ಕಾರ್ಯಕರ್ತರನ್ನು ಕಳೆದುಕೊಳ್ಳುವ ಭೀತಿಯೂ ಬಿಜೆಪಿಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಅಭಿವೃದ್ಧಿಯ ಆಧಾರದಲ್ಲಿ ಪಕ್ಷದಲ್ಲಿ ದುಡಿಯುತ್ತಿರುವ ಉತ್ಸಾಹಿ ಕಾರ್ಯಕರ್ತರು ಕೂಡ ಬಿಜೆಪಿಯಿಂದ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆಗಳು ಪಕ್ಷದೊಳಗೆ ವ್ಯಕ್ತವಾಗುತ್ತಿದೆ ಎಂದು ಹೇಳಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಣ ಲವ್ ಜಿಹಾದ್ ಕಾಯ್ದೆ ಜಾರಿಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರೂ, ಸಿಎಂ ಯಡಿಯೂರಪ್ಪ ಬಣ ಇದಕ್ಕೆ ಹೆಚ್ಚಿನ ಒಲವು ತೋರಿಸುತ್ತಿಲ್ಲ ಎಂದು ಹೇಳಲಾಗಿದೆ. ಕರಾವಳಿಯಲ್ಲಿ ಹೆಚ್ಚು ಸದ್ದು ಮಾಡಿದ್ದ ಲವ್ ಜಿಹಾದ್ ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗಿತ್ತು. ಆದರೆ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇಂತಹ ವಾತಾವರಣ ಇಲ್ಲ ಎನ್ನು ಅಭಿಪ್ರಾಯ ಇನ್ನೊಂದೆಡೆ ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ