“ಲವ್ ಜಿಹಾದ್” ವಿರೋಧಿ ಕಾನೂನು ಗುಜರಾತ್ ನಲ್ಲಿ ಜಾರಿಯಾಗಲ್ಲ | ಕಾರಣ ಏನು ಗೊತ್ತಾ?
ಗುಜರಾತ್: ಬಿಜೆಪಿ ಸರ್ಕಾರಬು ವಿವಿಧ ರಾಜ್ಯಗಳಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ “ಲವ್ ಜಿಹಾದ್” ವಿರೋಧಿ ಕಾನೂನು, ಗುಜರಾತ್ ನಲ್ಲಿ ಜಾರಿಯಾಗುವುದಿಲ್ಲ ಎಂದು ಹೇಳಲಾಗಿದ್ದು, ಈ ಕಾನೂನು ಜಾರಿ ಮಾಡಿದರೂ, ಈಗಾಗಲೇ ಬಲವಂತದ ಮತಾಂತರದ ವಿರುದ್ಧ ಸಂವಿಧಾನದಲ್ಲಿ ಇತರ ಕಾಯ್ದೆಗಳು ಇರುವ ಕಾರಣ ಈ ಕಾಯ್ದೆಗೆ ಮಾನ್ಯತೆ ಸಿಗುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಅಡ್ವೊಕೇಟ್ ಜನರಲ್ ಸೇರಿದಂತೆ ಹಲವು ಮಂದಿ ಕಾನೂನು ತಜ್ಞರು ಹೊಸ ಕಾಯ್ದೆಗೆ ಕಾನೂನಾತ್ಮಕ ಮಾನ್ಯತೆ ಸಿಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಾರ್ಚ್ 1ರಿಂದ ಆರಂಭವಾಗುವ ಬಜೆಟ್ ಅಧಿವೇಶನದ ವೇಳೆ ಈ ಮಸೂದೆ ಮಂಡಿಸದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದ್ದು, ಬಲವಂತವಾಗಿ, ಆಮಿಷ ಒಡ್ಡಿ ಅಥವಾ ವಂಚನೆ ವಿಧಾನದಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಇದಾದ ಬಳಿಕವೂ ಗುಜರಾತ್ ನಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಲವ್ ಜಿಹಾದ್ ವಿರೋಧಿ ಕಾಯ್ದೆ ಮಾನ್ಯತೆ ಪಡೆದುಕೊಳ್ಳುವುದಿಲ್ಲ ಎನ್ನುವ ಕಾರಣಕ್ಕಾಗಿ ಈ ಕಾಯ್ದೆ ಜಾರಿಯಿಂದ ಗುಜರಾತ್ ಸರ್ಕಾರ ಹಿಂದೆ ಸರಿದಿದೆ.