“ಆ ಥರದ ಪಾತ್ರ ಮಾಡಲ್ಲ” ಎಂದಿದ್ದ ರಚಿತಾ ರಾಮ್ “ಲವ್ ಯು ರಚ್ಚು” ಚಿತ್ರದಲ್ಲಿ ಕಾಣಿಸಿದ್ದು ಹೀಗೆ!
ನಟ ಉಪೇಂದ್ರ ಅವರ ಐ ಲವ್ ಯು ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಬಳಿಕ ಕಣ್ಣೀರು ಹಾಕಿದ್ದ ನಟಿ ರಚಿತಾ ರಾಮ್ ನಾನು ಇನ್ನು ಇಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ “ಲವ್ ಯು ರಚ್ಚು” ಸಿನಿಮಾದಲ್ಲಿ ಮತ್ತೆ ಅವರು ಬೋಲ್ಡ್ ಪಾತ್ರ ಮಾಡಿ ಸುದ್ದಿಯಲ್ಲಿದ್ದಾರೆ.
ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ನಟನೆಯ ಲವ್ ಯು ರಚ್ಚು ಸಿನಿಮಾದಲ್ಲಿ ಮತ್ತೆ ನಟಿ ರಚಿತಾ ರಾಮ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಲವ್ ಯು ರಚ್ಚು ಸಿನಿಮಾವು ಈಗಾಗಲೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಶೂಟಿಂಗ್ ವೇಳೆ ಫೈಟರ್ ವಿವೇಕ್ ಹೈ ವೋಲ್ಟೇಜ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಈ ಸಂಬಂಧ ಚಿತ್ರ ತಂಡದ ಕೆಲವರನ್ನು ಅರೆಸ್ಟ್ ಮಾಡಲಾಗಿತ್ತು.
ಇನ್ನೂ ಇತ್ತೀಚೆಗೆ ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದಾಗ ಅವರ ಅಂತಿಮ ದರ್ಶನ ಪಡೆದಿದ್ದ ರಚ್ಚು, ಪುನೀತ್ ಅವರ ಜೊತೆಗೆ ನಟಿಸಲು ನಾನು ಪುಣ್ಯ ಮಾಡಿದ್ದೆ. ಅದು ನಮ್ಮ ತಾಯಿಯ ಆಸೆ ಕೂಡ ಆಗಿತ್ತು ಎಂದು ಹೇಳಿದ್ದಾರೆ.
ಗುರುಕಿರಣ್ ಬರ್ತ್ ಡೇ ಪಾರ್ಟಿಯಲ್ಲಿ ಪುನೀತ್ ಸಿಕ್ಕಿದ್ದರು. ರಾತ್ರಿ ಅವರು ಪಾರ್ಟಿ ಮುಗಿಸಿ ಹೊರಟಾಗ “ಹುಷಾರು ಸರ್” ಎಂದಿದ್ದೆ. ಆದರೆ ಈಗ ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬಾ ಸಂಕಟವಾಗುತ್ತಿದೆ. ಕೈ ನಡುಗುತ್ತಿದೆ ಎಂದು ರಚಿತಾ ರಾಮ್ ಕಣ್ಣೀರು ಹಾಕಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka