“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ - Mahanayaka

“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ

love you rachu
09/08/2021

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು,  ಫೈಟ್ ಅಸಿಸ್ಟೆಂಟರ್ ವಿವೇಕ್ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.  ರಾಮನಗರದ ಬಿಡದಿ ಹೋಬಳಿಯ ಜೋಗರಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಚಿತ್ರೀಕರಣದ ವೇಳೆ ಮೆಟಲ್ ರೋಪ್ ಬಳಸಿದ್ದು, ಈ ವೇಳೆ ಹೈ ಟೆನ್ಶನ್ ತಂತಿ ತಗುಲಿದ್ದು, ಪರಿಣಾಮವಾಗಿ ತಮಿಳುನಾಡು ಮೂಲದ 35 ವರ್ಷ ವಯಸ್ಸಿನ ವಿವೇಕ್ ಅವರು ಮೃತಪಟ್ಟಿದ್ದಾರೆ ಎಂಧು ಹೇಳಲಾಗಿದ್ದು, ಈ ವೇಳೆ ಮತ್ತೋರ್ವರಿಗೆ ಗಾಯವಾಗಿದ್ದು, ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಸ್ಟಂಟ್ ಮಾಸ್ಟರ್ ವಿನೋದ್ ಮತ್ತು ನಿರ್ದೇಶಕ ಶಂಕರ್ ರಾಜ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ, ಘಟನೆ ನಡೆದ ವೇಳೆ ಸ್ಥಳದಲ್ಲಿ ನಾನಿರಲಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಚಿತ್ರೀಕರಣದ ವೇಳೆ ಹೈಟೆನ್ ಶನ್ ವಿದ್ಯುತ್ ತಂತಿಗೆ ಮೆಟಲ್ ರೋಪ್ ಬಳಸಿ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ಶಾಕ್ ಹೊಡೆದು ದುರಂತ ಸಂಭವಿಸಿದೆ. ನಾನು 5 ದಿನಗಳ ಹಿಂದೆಯೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೆ. ನಾವು ಪ್ರಶ್ನೆ ಮಾಡಿದರೆ ಕೋಪಕ್ಕೆ ಗುರಿಯಾಗಬೇಕಾಗುತ್ತೆ, ಮೂಗು ತೂರಿಸುತ್ತಾರೆ ಅಂತಾರೆ. ಮುಂಜಾಗೃತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಘಟನೆ ಸಂಭವಿಸಿದೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಈ ಚಿತ್ರದ ನಾಯಕ ನಟ ಅಜಯ್ ರಾವ್ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ 200 ಮೀಟರ್ ದೂರದಲ್ಲಿದ್ದೆ. ದುರಂತದ ವೇಳೆ ಜೋರಾದ ಸೌಂಡ್ ಆಗಿದೆ ಎದ್ದು ನೋಡುವಷ್ಟರಲ್ಲಿ ಗುಂಪು ಸೇರಿತ್ತು. ನಮ್ಮ ಹುಡುಗರು ಮಾಹಿತಿ ನೀಡಿದ್ದಾರೆ. ನಾನು ಯಾರನ್ನೂ ದೂರುತ್ತಿಲ್ಲ, ಆದರೆ ಬೇಜವಾಬ್ದಾರಿ ಇಂತಹ ದುರಂತಕ್ಕೆ ಕಾರಣವಾಗುತ್ತಿದೆ. ಹಾಗಾಗಿ ತನಿಖೆ ನಡೆಸಬೇಕು ಎಂದು ಅಜಯ್ ಆಗ್ರಹಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

SSLC Exam result 2021 | ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ, ಎಲ್ಲರೂ ಪಾಸ್

ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?

ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ!

ವಾಟ್ಸಾಪ್ ಮೂಲಕ ಕೊವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ?

ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್

ಇತ್ತೀಚಿನ ಸುದ್ದಿ