ಬ್ರೇಕಪ್ ಮಾಡಿಕೊಂಡ ಯುವತಿಗೆ ಮನಬಂದಂತೆ ಇರಿದ ಪ್ರಿಯಕರ: ಟ್ರಾಫಿಕ್ ಪೊಲೀಸ್ ನಿಂದ ಯುವತಿಯ ರಕ್ಷಣೆ
ಕೋಲ್ಕತಾ: ಬ್ರೇಕಪ್ ಮಾಡಿಕೊಂಡ ಯುವತಿಯ ಮೇಲೆ ಭಗ್ನ ಪ್ರೇಮಿಯೋರ್ವ ಭೀಕರ ದಾಳಿ ನಡೆಸಿದ್ದು, ಚಾಕುವಿನಿಂದ ಅಟ್ಟಾಡಿಸಿ ಇರಿದ ಪ್ರೇಮಿ, ನೀರಲ್ಲಿ ಮುಳುಗಿಸಿ ಯುವತಿಯ ಹತ್ಯೆಗೆ ಮುಂದಾಗಿದ್ದಾನೆ.
ಈ ಘಟನೆ ನಡೆದಿರೋದು, ಕೋಲ್ಕತಾದ ಸರ್ವೆ ಪಾರ್ಕ್ ಪ್ರದೇಶದಲ್ಲಿ. 21 ವರ್ಷದ ಯುವತಿಯನ್ನು ಮಾಜಿ ಪ್ರಿಯಕರ ಅಟ್ಟಾಡಿಸಿ ಮನಸ್ಸೋ ಇಚ್ಛೆ ಇರಿದಿದ್ದು, ಈ ವೇಳೆ ಆಕೆ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಅಜೋಯನಗರ ಕ್ರಾಸಿಂಗ್ ಬಳಿಯ ಸಂತೋಷ್ಪುರದ ಕೊಳಕ್ಕೆ ಎಳೆದೊಯ್ದು ನೀರಲ್ಲಿ ಮುಳುಗಿಸಿ ಹತ್ಯೆಗೆ ಯತ್ನಿಸಿದ್ದಾನೆ.
ರಸ್ತೆಯಲ್ಲಿ ಅಮಾನವೀಯ ಕೃತ್ಯವೊಂದು ನಡೆಯುತ್ತಿದ್ದರೂ, ಜನರು ಸುಮ್ಮನೆ ನೋಡುತ್ತಾ ಬಿಟ್ಟಿ ಮನರಂಜನೆ ಪಡೆದುಕೊಂಡರು. ಇದೇ ವೇಳೆ ಪುರ್ಬಾ ಜಾದವ್ಪುರ ಟ್ರಾಫಿಕ್ ಗಾರ್ಡ್ ಜೋಯ್ಜೀತ್ ಸಹಾ ಯುವಕನನ್ನು ತಡೆದು, ಯುವತಿಯನ್ನು ರಕ್ಷಿಸಿದ್ದು, ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಂದೆರಡು ತಿಂಗಳುಗಳಿಂದ ಇವರಿಬ್ಬರಿಗೆ ಬ್ರೇಕಪ್ ಆಗಿತ್ತು. ಬ್ರೇಕಪ್ ಬಳಿಕ ಪ್ರಿಯಕರ ಮತ್ತೆ ತನ್ನನ್ನು ಭೇಟಿಯಾಗುವಂತೆ ಕರೆದಿದ್ದ. ಮಾತುಕತೆ ವೇಳೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು. ಇದರಿಂದ ರೊಚ್ಚಿಗೆದ್ದ ಪ್ರಿಯಕರ ಯುವತಿಯ ಮೇಲೆ ಭೀಕರ ದಾಳಿ ನಡೆಸಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw