ಲಕ್ನೋದ ಗುಲ್ ಜಾನ್ ನಗರದ ಬಾಲಕನನ್ನು ಮರಳಿ ಮನೆಗೆ ಸೇರಿಸಿದ ಬೆಳ್ತಂಗಡಿಯ ಸಿಯೋನ್ ಆಶ್ರಮ
ಲಕ್ನೋದ ಗುಲ್ ಜಾನ್ ನಗರ ಎಂಬಲ್ಲಿಂದ ಮೇ 15ರಂದು ನಾಪತ್ತೆಯಾಗಿದ್ದ ಬಾಲಕನನ್ನು ಮರಳಿ ಮನೆ ಸೇರಿಸುವಲ್ಲಿ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲಿನ ಸಿಯೋನ್ ಆಶ್ರಮ ಯಶಸ್ವಿಯಾಗಿದೆ.
ಸುಫಿಯಾನ್ (15) ಎಂಬ ಮಾನಸಿಕ ಅಸ್ವಸ್ಥ ಬಾಲಕ ಲಕ್ನೋದಿಂದ ದೆಹಲಿಗೆ ಬಂದು, ಅಲ್ಲಿಂದ ಮಂಗಳೂರಿಗೆ ಆಗಮಿಸಿದ್ದನು. ಈತನ ವಿಳಾಸ ಪತ್ತೆಯಾಗದ ಕಾರಣ ಬಳಿಕ ಆತನನ್ನು ಉಡುಪಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸಿಯೋನ್ ಆಶ್ರಮಕ್ಕೆ ದಾಖಲಿಸಲಾಗಿತ್ತು.
ಸಿಯೋನ್ ಆಶ್ರಮದಲ್ಲಿ ಬಾಲಕನಿಗೆ ಕೌನ್ಸಿಲಿಂಗ್ ಮತ್ತು ಸೂಕ್ತ ಚಿಕಿತ್ಸೆಗಳನ್ನು ನೀಡಲಾಯಿತು. ಇದರಿಂದ ಸುಧಾರಣೆ ಕಂಡ ಬಾಲಕ ನೀಡಿದ ಅಸ್ಪಷ್ಟ ಮಾಹಿತಿಗಳ ಆಧಾರದಲ್ಲಿ ಸಿಯೋನ್ ಆಶ್ರಮದ ಟ್ರಸ್ಟಿ ಸದಸ್ಯ ಸುಭಾಷ್ ಯು.ಪಿ. ಮತ್ತು ತಂಡದವರು ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಬಾಲಕನ ವಿಳಾಸ ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದರು.
ಅದರಂತೆ ಬಾಲಕನ ಚಿಕ್ಕಪ್ಪ ಮಹಮ್ಮದ್ ಶಬೀರ್ ಹಾಗೂ ಚಿಕ್ಕಮ್ಮ ಶಕೀಲಾ ಬಾನು ಸಿಯೋನ್ ಆಶ್ರಮಕ್ಕೆ ಆಗಮಿಸಿ ಬಾಲಕನನ್ನು ತಮ್ಮೊಂದಿಗೆ ಕರೆದೊಯ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka