ಲುಲು ಮಾಲ್ ಶುದ್ಧ ಮಾಡಲು ಬಂದ ಸ್ವಾಮೀಜಿ ಅರೆಸ್ಟ್! - Mahanayaka
10:28 AM Thursday 12 - December 2024

ಲುಲು ಮಾಲ್ ಶುದ್ಧ ಮಾಡಲು ಬಂದ ಸ್ವಾಮೀಜಿ ಅರೆಸ್ಟ್!

swamiji arrest
20/07/2022

ಲಕ್ನೋ:  ಲಕ್ನೋದಲ್ಲಿ ಹೊಸದಾಗಿ ತೆರೆಯಲ್ಪಟ್ಟ ಲುಲು ಮಾಲ್ ನಲ್ಲಿ ನಮಾಝ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯ ಪ್ರಸಿದ್ಧ ಪುರೋಹಿತ  ಜಗದ್ಗುರಿ ಪರಮಹಂಸ ಮಾಲ್ ನ್ನು ಶುದ್ಧ ಮಾಡಲು ಆಗಮಿಸಿದ್ದು, ಈ ವೇಳೆ ಸ್ವಾಮೀಜಿಯನ್ನು ಬಂಧಿಸಲಾಗಿದೆ.

ಲುಲು ಮಾಲ್ ನಲ್ಲಿ ನಮಾಝ್ ಮಾಡಿದ ಸ್ಥಳ ಅಪವಿತ್ರವಾಗಿದೆ. ಅದನ್ನು ಶುದ್ಧ ಮಾಡಬೇಕು ಎಂಬ ನೆಪದಲ್ಲಿ ಸ್ವಾಮೀಜಿ ಆಗಮಿಸಿದ್ದು, ಈ ವೇಳೆ ಮಾಲ್ ಮುಂದೆ ತಡೆದ ಪೊಲೀಸರು, ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೂ ಲೂಲು ಮಾಲ್ ಗೆ ದೇವರ ಹೆಸರಿಡಬೇಕು ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದು, ಸ್ವಾಮೀಜಿಯ ವಿಚಿತ್ರ ಬೇಡಿಕೆಗೆ ಮಾಲ್ ನ ಆಡಳಿತ ಮಂಡಳಿ ಸುಸ್ತಾಗಿದೆ. ಈ ಹಿಂದೆ ಇದೇ ಸ್ವಾಮೀಜಿ ತಾಜ್ ಮಹಲ್ ಮುಂದೆ ಜಲಾಭಿಷೇಕ ಮಾಡಲು ಹೈಡ್ರಾಮಾ ಮಾಡಿತ್ತು. ಈ ವೇಳೆಯೂ ಸ್ವಾಮೀಜಿಯನ್ನು ತಡೆದು ವಾಪಸ್ ಕಳುಹಿಸಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ