ಇವರು ಪದಕಗಳ ಸರದಾರ! | ಎತ್ತರದ ಸಾಧನೆ ಮಾಡಿದ್ರು ಸಿಗಲಿಲ್ಲ ಗೌರವ: ಕಾರಣ ಜಾತಿ? - Mahanayaka

ಇವರು ಪದಕಗಳ ಸರದಾರ! | ಎತ್ತರದ ಸಾಧನೆ ಮಾಡಿದ್ರು ಸಿಗಲಿಲ್ಲ ಗೌರವ: ಕಾರಣ ಜಾತಿ?

md nagendra
29/12/2022

ಇವರು ಕೊರಳು ತುಂಬ ಧರಿಸಿರುವ ಪದಕಗಳನ್ನು ನೋಡಿದ್ರೆ, ಇವರೇನು ಪದಕಗಳ ಸರದಾರನೋ? ಅನ್ನೋ ಅನುಮಾನ ಬರಬಹುದು. ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಡಿ.ನಾಗೇಂದ್ರ ಅವರು, ಕ್ರೀಡೆಯಲ್ಲಿ ಮಾಡಿರುವ ಸಾಧನೆ ಅಂತಿಂಥಹದ್ದಲ್ಲ… ಅನ್ನೋದು ಅವರ ಕೊರಳಿಗೇರಿದ ಪದಕಗಳನ್ನು ನೋಡಿದರೆನೇ ತಿಳಿಯಬಹುದು.


Provided by
Provided by
Provided by
Provided by
Provided by
Provided by
Provided by
Provided by

ಸರಗೂರು ತಾಲ್ಲೂಕು ಮುಳ್ಳೂರು ಗ್ರಾಮದ ಶ್ರೀಮತಿ ಚಿನ್ನಮ್ಮ ದಾಸಯ್ಯರವರ ಕಿರಿಯ ಪುತ್ರರಾದ ಎಂ.ಡಿ.ನಾಗೇಂದ್ರ ಅವರು, 1993ರಲ್ಲೇ ಸ್ವಗ್ರಾಮ ಮುಳ್ಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಜೆಎಸ್ ಎಸ್ ಹುಲ್ಲಹಳ್ಳಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಮುಗಿಸಿ 2007ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಪೊಲೀಸ್ ಪೇದೆಯಾಗಿ ನೇಮಕವಾಗುತ್ತಾರೆ.ವಿದ್ಯಾರ್ಥಿದೆಸೆಯಲ್ಲೇ ಬಿವಿಎಸ್ ನಂತಹ ವಿದ್ಯಾರ್ಥಿ ಸಂಘದ ಶಿಬಿರಗಳಲ್ಲಿ ದೊಡ್ಡಸಾಧನೆ ಮಾಡುವ ಕನಸು ಕಂಡವರು ನಾಗೇಂದ್ರ.

ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರೂ ಇವರ ಕ್ರೀಡಾಭಿಮಾನ ನಿಂತಿರಲಿಲ್ಲ, 2017ರ ಡಿಸೆಂಬರ್ ನಲ್ಲಿ ಬೆಂಗಳೂರಿನ ಜಿಲ್ಲೆಯ ಹೊಸಕೋಟೆ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಆಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದು ಮೊದಲ ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.
2019ರ ಜನವರಿಯಲ್ಲಿ ಆಂಧ್ರಪ್ರದೇಶದ ಗುಂಟೂರ್ ನ ನಾಗಾರ್ಜುನ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 400 ಮೀಟರ್ ಓಟದ ವಿಭಾಗದಲ್ಲಿ 4ನೇ ಸ್ಥಾನವನ್ನು ಪಡೆದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದರು.

2019ರ ಸೆಪ್ಟೆಂಬರ್ ನಲ್ಲಿ ಮಲೇಷಿಯಾದಲ್ಲಿ ನಡೆದ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ 400 ಮೀಟರ್ ಓಟ ವಿಭಾಗದಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಈ ಮೂಲಕ 2019ರಲ್ಲಿ ಮೈಸೂರಿನ ಲಯನ್ಸ್ ಸಂಸ್ಥೆಯವರು ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ನೀಡುವ ದಕ್ಷಿಣ ಕೇಸರಿ ಅವಾರ್ಡ್ ನ್ನು ಪಡೆದುಕೊಂಡಿದ್ದರು.
2020ರ ನವೆಂಬರ್ ನಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ ರಾಷ್ಟ್ರೀಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 400 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿಯ ಪದಕ, 200 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿಯ ಪದಕ, 4×100 ಮೀಟರ್ ರೀಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 4×400 ಮೀಟರ್ ರೀಲೆ ಸ್ಪರ್ಧೆಯಲ್ಲೂ ಚಿನ್ನದ ಪದಕವನ್ನು ಪಡೆದಿದ್ದಾರೆ.

2021ರ ಫೆಬ್ರವರಿಯಲ್ಲಿ ಗುಜರಾತ್ ನ ವಡೋದರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ 400 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿಯ ಪದಕ, 200 ಮೀಟರ್ ಓಟದ ವಿಭಾಗದಲ್ಲಿ ವಿಭಾಗದಲ್ಲಿಯೂ ಬೆಳ್ಳಿಯ ಪದಕ, 4X400 ಮೀಟರ್ ರೀಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 4X400 ಮೀಟರ್ ರೀಲೆ ವಿಭಾಗದಲ್ಲೂ ಚಿನ್ನದ ಪದಕವನ್ನು ಪಡೆದಿದ್ದಾರೆ.

2022ರ ಮೇ ತಿಂಗಳಿನಲ್ಲಿ ಬೆಂಗಳೂರಿನ ವಿದ್ಯಾನಗರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಾಗೇಂದ್ರ, 400 ಮೀಟರ್ ಓಟದ ವಿಭಾಗದಲ್ಲಿ ಚಿನ್ನದ ಪದಕ, 200 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿಯ ಪದಕ, 100 ಮೀಟರ್ ಓಟದ ವಿಭಾಗದಲ್ಲಿ ಕಂಚಿನ ಪದಕ, 4X100 ಮೀಟರ್ ರೀಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ 4X400 ಮೀಟರ್ ರೀಲೆ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.

2022ರ ನವೆಂಬರ್ ತಿಂಗಳಿನಲ್ಲಿ ನೇಪಾಳ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ 100 ಮೀಟರ್, 200 ಮೀಟರ್ ಮತ್ತು 400 ಮೀಟರ್ ಈ ಮೂರು ವಿಭಾಗಗಳಲ್ಲಿ ಮೂರು ಚಿನ್ನದ ಪದಕ ಗೆದ್ದಿದ್ದಾರೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆದ ಸೌತ್ ಝೋನ್ ನ್ಯಾಷನಲ್ಸ್ ನ 100 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿಯ ಪದಕ, 4×100 ರೀಲೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 200 ಮೀಟರ್ ಮತ್ತು 400 ಮೀಟರ್ ಓಟದ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಅಕ್ಕ ಐಎಎಸ್ ಅಕಾಡೆಮಿಯಲ್ಲಿ ಡಾ.ಶಿವಕುಮಾರ್ ಅವರಿಂದ ಅಭಿನಂದನೆ


ಕ್ರೀಡಾ ಕ್ಷೇತ್ರದಲ್ಲಿ ಇವರ ಸಾಧನೆಯ ಪಟ್ಟಿಯನ್ನು ಗಮನಿಸುತ್ತಾ ಹೋದರೆ, ನಮಗೆ ಅಚ್ಚರಿ ಸೃಷ್ಟಿಯಾಗಬಹುದು. ಜೊತೆಗೆ ಛಲ ಬಿಡದೇ ಪದಕಗಳ ಮೇಲೆ ಪದಕಗಳನ್ನು ಗೆದ್ದು ಸಾಧನೆ ಮಾಡಿದ ಇವರ ಸಾಧನೆಯ ಬಗ್ಗೆ ಹೆಮ್ಮೆಯಾಗಬಹುದು. ಇವರು ಪದಕಗಳ ಸರದಾರ, ಪದಕಗಳ ದೊರೆ ಎಂದೇ ಕರೆಯಬಹುದು. ಆದರೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಇವರಿಗೆ ಪೊಲೀಸ್ ಇಲಾಖೆಯಲ್ಲಿ ಸಣ್ಣಪುಟ್ಟ ಹಾರಹಾಕಿ ಅಭಿನಂದನೆ ಮಾಡಿದ್ದನ್ನು ಬಿಟ್ಟರೆ ದೊಡ್ಡಮಟ್ಟದ ಅಧಿಕಾರಿಗಳು ಗೌರವ ಸಲ್ಲಿಸಲು ಯಾರೂ ಮುಂದಾಗಿಲ್ಲ ಅನ್ನೋದು ದುರಾದೃಷ್ಟವಾಗಿದೆ.
ಸನ್ಮಾನ, ಅಭಿನಂದನೆಗಳನ್ನು ಪಡೆಯಬೇಕಾದರೆ, ಕೇವಲ ಸಾಧನೆಯೊಂದರಿದ್ದರೆ ಸಾಲದು, ಜಾತಿಯಲ್ಲೂ ಮೇಲ್ಜಾತಿ ಅನ್ನಿಸಿಕೊಳ್ಳಬೇಕು ಅನ್ನೋ ಸ್ಥಿತಿ ನಮ್ಮ ರಾಜ್ಯದಲ್ಲಿಯೂ ಇದೆಯಾ? ಜಾತಿಯ ಕಾರಣಕ್ಕಾಗಿ ಎಂ.ಡಿ.ನಾಗೇಂದ್ರ ಅವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಿಲ್ಲವೇ? ಅನ್ನುವ ಪ್ರಶ್ನೆಗಳು ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ.
ರಾಜಸ್ಥಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಸಿಂಗ್ ಎನ್ನುವ ದಲಿತ ಮಹಿಳೆಯನ್ನು ಅಲ್ಲಿನ ಸರ್ಕಾರ ನಿರ್ಲಕ್ಷಿಸಿದ ಬೆನ್ನಲ್ಲೇ, ಎಂ.ಡಿ.ನಾಗೇಂದ್ರ ಅವರಿಗೆ ಕೂಡ ಇಂತಹದ್ದೇ ಅವಮಾನ ಆಗಿದೆ ಅನ್ನೋ ಮಾತುಗಳು ಮೈಸೂರಿನಾದ್ಯಂತ ಕೇಳಿ ಬಂದಿದೆ.

ಮೈಸೂರಿನ ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರ ಅವರ ಸಾಧನೆಗೆ ಇಡೀ ರಾಜ್ಯವೇ ಹೆಮ್ಮೆ ಪಡಬೇಕಿತ್ತು. ಇವರು ಗಳಿಸಿದ ಪದಕಗಳು ಒಂದೆರಡಲ್ಲ. ಆದರೆ, ಜಾತಿಯ ಕಾರಣಕ್ಕೋ ಅಥವಾ ಇನ್ನೇನೋ ಕಾರಣಕ್ಕೋ ಅವರನ್ನು ಗುರುತಿಸುವ ಕೆಲಸ ಆಗಿಲ್ಲ ಅನ್ನೋ ಅನುಮಾನದ ಮಾತುಗಳು ಕೇಳಿ ಬಂದಿವೆ.

ಅಂದ ಹಾಗೆ, ಎಂ.ಡಿ.ನಾಗೇಂದ್ರ ಇವರ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಅಕ್ಕ ಐಎಎಸ್ ಅಕಾಡೆಮಿಯಲ್ಲಿ ಅವರನ್ನು ಸಂಸ್ಥೆಯ ನಿರ್ದೇಶಕರಾದ ಡಾ.ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ