ಇಳೆಯದಳಪತಿ ನಟ ವಿಜಯ್-ಎಂ.ಎಸ್.ಧೋನಿ ಭೇಟಿ | ಕಾರಣ ಏನು ಗೊತ್ತಾ? - Mahanayaka

ಇಳೆಯದಳಪತಿ ನಟ ವಿಜಯ್-ಎಂ.ಎಸ್.ಧೋನಿ ಭೇಟಿ | ಕಾರಣ ಏನು ಗೊತ್ತಾ?

m s dhoni vijay
12/08/2021

ಸಿನಿಡೆಸ್ಕ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಹಾಗೂ ತಮಿಳುನಟ ಇಳೆಯದಳಪತಿ ವಿಜಯ್ ಅವರು ಪರಸ್ಪರ ಭೇಟಿಯಾಗಿದ್ದು, ಇವರಿಬ್ಬರ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ಬೀಸ್ಟ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಜಾಹೀರಾತೊಂದರಲ್ಲಿ ನಟಿಸಲು  ಮಹೇಂದ್ರ ಸಿಂಗ್ ಧೋನಿ ಕೂಡ ಇದೇ ಸ್ಟುಡಿಯೋಗೆ ಆಗಮಿಸಿದ್ದರು. ಈ ವಿಚಾರ ಎರಡೂ ತಂಡಗಳಿಗೆ ತಿಳಿದಿದ್ದು, ವಿಜಯ್ ಮತ್ತು ಧೋನಿ ಪರಸ್ಪರ ಭೇಟಿಯಾಗಿದ್ದಾರೆ.

ಇನ್ನೂ ನಟ ವಿಜಯ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿ 2008ರ ಐಪಿಎಲ್ ನಲ್ಲಿ ನೇಮಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಕೂಡ ಅದೇ ತಂಡದಲ್ಲಿದ್ದಾರೆ. ಹೀಗಾಗಿ ಈ ಭೇಟಿ ಇನ್ನಷ್ಟು ಮಹತ್ವವನ್ನು ಪಡೆದುಕೊಂಡಿತ್ತು.

ಇನ್ನಷ್ಟು ಸುದ್ದಿಗಳು…

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

ಆಹಾರದಲ್ಲಿ ವಿಷ ಬೆರೆಸಿ ತಂದೆ, ಅಣ್ಣ, ತಂಗಿಯನ್ನು ಕೊಂದ 15 ವರ್ಷದ ಬಾಲಕಿ

ತರಬೇತಿ ವೇಳೆ ಕಾನ್ಸ್ ಟೇಬಲ್ ಸಾವು | ಅಧಿಕಾರಿಗಳ ವಿರುದ್ಧ ಟೈನಿ ಕಾನ್ಸ್ ಟೇಬಲ್ ಪ್ರತಿಭಟನೆ

ಇತ್ತೀಚಿನ ಸುದ್ದಿ