NEET ಪರೀಕ್ಷೆಯಲ್ಲಿ ಪಾಸ್ ಆದ ಎಸ್ ಟಿ ಸಮುದಾಯದ ಬಡ ಹುಡುಗಿ ಸಂಗಾವಿಗೆ ಎಂಬಿಬಿಎಸ್ ಮಾಡುವ ಆಸೆ
ಕೊಯಮತ್ತೂರು: ಮೊದಲ ಬಾರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಸಮುದಾಯ(ಎಸ್ ಟಿ)ದ 20 ವರ್ಷ ವಯಸ್ಸಿನ ಯುವತಿಯೊಬ್ಬಳು ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ(NEET)ಯಲ್ಲಿ ತೇರ್ಗಡೆಗೊಂಡಿದ್ದು, ಈ ಮೂಲಕ ತಮ್ಮ ಗ್ರಾಮದಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮೊದಲ ಯುವತಿಯಾಗಿ ಹೊರ ಹೊಮ್ಮಿದ್ದಾರೆ.
ಮಲಸರ್ ನ ಬುಡಕಟ್ಟು ಸಮುದಾಯದ 20 ವರ್ಷ ವಯಸ್ಸಿನ ಎಂ.ಸಂಗಾವಿ ಈ ಸಾಧನೆ ಮಾಡಿದವರಾಗಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದ ಸಂಗಾವಿ, ತನ್ನ ತಾಯಿಯ ಜೊತೆಗೆ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಸಂಗಾವಿ ಅವರ ತಾಯಿಗೆ ಅಂಧೆಯಾಗಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೇ ಸಂಗಾವಿ ಎಲ್ಲವನ್ನು ಎದುರಿಸಿ ನಿಂತು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
720 ಅಂಕಗಳಲ್ಲಿ ನಡೆದ Neet 2021 ಪರೀಕ್ಷೆಯಲ್ಲಿ ಸಂಗಾವಿ 202 ಅಂಕಗಳನ್ನು ಗಳಿಸುವ ಮೂಲಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ, ಮುಂದೆ ಅವರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಸಂಗಾವಿ ಮಧುಕ್ಕರೈ ತಾಲೂಕಿನ ರೊಟ್ಟಿಗೌಂಡೆನ್ ಪುದೂರ್ ಬಳಿ ಗುಡಿಸಲೊಂದರಲ್ಲಿ ತಮ್ಮ ತಾಯಿಯ ಜೊತೆಗೆ ನೆಲೆಸಿದ್ದಾರೆ. 2020ರಲ್ಲಿ ಇವರು ಎಸ್ ಟಿ ಸಮುದಾಯದ ಪ್ರಮಾಣ ಪತ್ರ ಪಡೆಯಲು ಸ್ಥಳೀಯ ಅಧಿಕಾರಿಗಳು ಸಹಕರಿಸದೇ ಕಚೇರಿಗಳಿಗೆ ಅಲೆದಾಟುವಂತೆ ಮಾಡಿದ್ದರು. ಆದರೆ, ಇದನ್ನು ದಿಟ್ಟತನದಿಂದ ಎದುರಿಸಿದ ಸಂಗಾವಿ, ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು. ಕೊನೆಗೂ ಜಾತಿ ಪ್ರಮಾಣ ಪತ್ರ ಲಭಿಸಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka