ಮಾ. 13ರಿಂದ ಬಿಎಸ್‌ ಪಿಯಿಂದ ವಿಭಾಗ ಮಟ್ಟದ ಜನಜಾಗೃತಿ ಸಮಾವೇಶ - Mahanayaka

ಮಾ. 13ರಿಂದ ಬಿಎಸ್‌ ಪಿಯಿಂದ ವಿಭಾಗ ಮಟ್ಟದ ಜನಜಾಗೃತಿ ಸಮಾವೇಶ

mayavathi
03/03/2022

ಬೆಳಗಾವಿ: ರಾಯಚೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಅವರ ಫೋಟೊಗೆ ಅವಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ. 13ರಿಂದ ಬಿಎಸ್‌ಪಿ ವತಿಯಿಂದ ವಿಭಾಗ ಮಟ್ಟದ ಜನಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಘಟಕದ ಸಂಯೋಜಕ ಎಂ.ಗೋಪಿನಾಥ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13ರಂದು ಬೆಳಗಾವಿ, 15ರಂದು ಬೀದರ್, 17ರಂದು ಮೈಸೂರು ಹಾಗೂ 18ರಂದು ಬೆಂಗಳೂರಿನಲ್ಲಿ ಜನಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

‘ಸಂವಿಧಾನಶಿಲ್ಪಿಯ ಫೋಟೊಗೆ ಅವಮಾನ ಮಾಡಿದವರ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯಾದ್ಯಂತ ಬಹುಜನರಿಂದ ಆಕ್ರೋಶ ವ್ಯಕ್ತವಾಗಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ನ್ಯಾ.ನಾಗಮೋಹನದಾಸ್ ವರದಿಯ ಶಿಫಾರಸಿನ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ.


Provided by

ಪರಿಶಿಷ್ಟ ಜಾತಿಗಳ ಎಂಜಿನಿಯರ್‌ಗಳಿಗೆ ಬಡ್ತಿ ಮೀಸಲಾತಿಗೆ ತಡೆ ನೀಡಲಾಗಿದೆ. ಒಬಿಸಿ ವರ್ಗದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಡದೆ ಅನ್ಯಾಯ ಮಾಡಲಾಗಿದೆ. ಇದೆಲ್ಲದರ ವಿರುದ್ಧ ಸಮಾವೇಶಗಳಲ್ಲಿ ಸರ್ಕಾರದ ಗಮನಸೆಳೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಭೂ ಪರಭಾರೆ ನಿಷೇಧ ಕಾಯ್ದೆಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ತೊಂದರೆ ಆಗುತ್ತದೆ. ಬಗರ್‌ಹುಕುಂ ಭೂಮಿಯನ್ನು ಸಕ್ರಮಗೊಳಿಸದೆ ಖಾಸಗಿಯವರಿಗೆ ಮಾರಲು ಮುಂದಾಗಿರುವ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಉಪಸಮಿತಿ ರಚಿಸಿರುವುದು ತೀವ್ರ ಖಂಡನೀಯವಾದುದು.

ಇಂತಹ ಸಂಗತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ತೋರವಿ, ಕಾರ್ಯದರ್ಶಿ ಸುಧಾಕರ ಜೋಗಳೆ, ಜಿಲ್ಲಾ ಘಟಕದ ಅಧ್ಯಕ್ಷ ಯಮನಪ್ಪ ತಳವಾರ ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಬೆಂಕಿ ಅವಘಡ : ಪತಿ ಸಾವು, ಪತ್ನಿ ಗಂಭೀರ

ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ: ಕೇಂದ್ರದ ವಿರುದ್ಧ ಉಕ್ರೇನ್‌ ನಿಂದ ಮರಳಿದ ವಿದ್ಯಾರ್ಥಿಗಳು ಆಕ್ರೋಶ

ನಾಲ್ಕು ಮಂತ್ರಿಗಳು ಯಾರ ಹತ್ತಿರ ಮಾತಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ನವೀನ್ ಸಾವು: ಬಿಜೆಪಿ ನಾಯಕರಿಂದ ಅರ್ಥವಿಲ್ಲದ ಹೇಳಿಕೆ; ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ

ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

 

ಇತ್ತೀಚಿನ ಸುದ್ದಿ