ಮಾಟ ಮಂತ್ರದಿಂದ ನೆಮ್ಮದಿ ಪಡೆಯಲು ಹೋಗಿ 4.41 ಕೋಟಿ ರೂಪಾಯಿ ಕಳೆದುಕೊಂಡ ಮಹಿಳೆ - Mahanayaka
6:59 AM Thursday 19 - September 2024

ಮಾಟ ಮಂತ್ರದಿಂದ ನೆಮ್ಮದಿ ಪಡೆಯಲು ಹೋಗಿ 4.41 ಕೋಟಿ ರೂಪಾಯಿ ಕಳೆದುಕೊಂಡ ಮಹಿಳೆ

black magic mony
06/10/2021

ಬೆಂಗಳೂರು: ಮಾಟ ಮಂತ್ರದ ಹೆಸರಿನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರಿಗೆ ಬರೋಬ್ಬರಿ 4.41 ಕೋಟಿ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ಇದೀಗ ಘಟನೆಗೆ ಸಂಬಂಧಿಸಿದಂತೆ  ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 1 ಕೆ.ಜಿ. ಚಿನ್ನ ಹಾಗೂ 10 ಲಕ್ಷ ನಗದು ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗೀತಾ ಗುರುದೇವ್ ಎಂಬವರು ವಂಚನೆಗೊಳಗಾಗಿರುವ ಮಹಿಳೆಯಾಗಿದ್ದಾರೆ. ಮೃಧು ಸ್ವಭಾವದ ಗೀತಾ ಅವರು ಜೀವನದಲ್ಲಿ ತುಂಬಾನೆ ನೊಂದಿದ್ದು, ನೆಮ್ಮದಿಗಾಗಿ ಹುಡುಕುತ್ತಿದ್ದರು. ಇವರ ಮಾನಸಿಕ ಸ್ಥಿತಿಯನ್ನು ಬಳಸಿಕೊಂಡ ಇವರ ಮನೆ ಕೆಲಸದ ಜಯಶ್ರೀ ಎಂಬಾಕೆ, ಅಕ್ಕಾ ನನಗೆ ಮಂತ್ರವಾದ ಗೊತ್ತಿದೆ.  ನಿಮಗೆ ಯಾರೋ ಮಾಟ ಮಾಡಿಸ್ಬಿಟ್ಟಿದ್ದಾರೆ. ಅದಕ್ಕೆ ನೀವು ಪರಿಹಾರ ಮಾಡಿಲ್ಲವಾದರೆ, ರಕ್ತ ಕಕ್ಕಿ ಸಾಯುತ್ತೀರಿ ಎಂದು ಹೆದರಿಸಿದ್ದಾಳೆ.

ಕೆಲಸದಾಕೆಯ ಮಾತು ನಂಬಿ ಆರಂಭದಲ್ಲಿ 1 ಕೆ.ಜಿ. ಚಿನ್ನ, ಮಹಿಳೆ 1.42 ಕೋಟಿ ರೂಪಾಯಿ ನೀಡಿದ್ದಾರೆ. ಬಳಿಕ 30 ಲಕ್ಷ ನೀಡಿದ್ದಾರೆ. ಆನಂತರ ಮತ್ತೊಂದು ಬಾರಿ  1.72 ಕೋಟಿ ಹಾಗೂ 1.90 ಕೋಟಿ ರೂಪಾಯಿಗಳನ್ನು ಮಹಿಳೆಯಿಂದ ಆರೋಪಿಗಳು ಮಾಟದ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ.  ಹೀಗೆ ಒಟ್ಟು 4.41 ಕೋಟಿ ರೂಪಾಯಿ ಮಹಿಳೆಗೆ ವಂಚಿಸಿದ್ದಾರೆ.


Provided by

ಕೋಟಿಗಟ್ಟಲೆ ಹಣವನ್ನು ಮಾಟ ಮಂತ್ರಕ್ಕಾಗಿ ಖರ್ಚು ಮಾಡಿದರೂ, ಮಹಿಳೆಗೆ ನೆಮ್ಮದಿಯೇ ಸಿಗಲಿಲ್ಲ ಅವರ ಯಾವ ಸಮಸ್ಯೆಯೂ ಪರಿಹಾರವಾಗದಿದ್ದಾಗ ಅನುಮಾನಗೊಂಡು ತಮ್ಮ ಪತಿಯೊಂದಿಗೆ ಜಯಶ್ರೀ ಮನೆಗೆ ಹೋಗಿ ನೀನು ಮೋಸ ಮಾಡಿದ್ದಿ. ನನ್ನ ಹಣ ಮತ್ತು ಆಭರಣ ನನಗೆ ವಾಪಸ್ ಕೊಡು ಎಂದು ಗೀತಾ ಕೇಳಿದ್ದು, ಈ ವೇಳೆ ಜಯಶ್ರೀಯ ಸಹಚರರು ಗೀತಾ ದಂಪತಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆ ಬಳಿಕ ಪೊಲೀಸರಿಗೆ ಗೀತಾ ದೂರು ನೀಡಿದ್ದಾರೆ. ಇದೀಗ ಜಯಶ್ರೀ ಹಾಗೂ ರಾಕೇಶ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದು,  ಅವರಿಂದ 1 ಕೆ.ಜಿ. ಚಿನ್ನ ಹಾಗೂ 10 ಲಕ್ಷ ನಗದು ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೂಜೆ ಮಾಡಿದ ತಕ್ಷಣ ಸಮಸ್ಯೆಗಳು ಪರಿಹಾರವಾಗುವುದೇ ಆಗಿದ್ದರೆ,  ಎಲ್ಲವೂ ಬಹಳ ಸುಲಭ ಅಲ್ಲವೇ? ನಂಬಿಕೆ ಇರಲಿ. ಆದರೆ, ಮೂಢನಂಬಿಕೆ ನಮ್ಮನ್ನು ಇಲ್ಲದ ಸಂಕಷ್ಟಕ್ಕೆ ದೂಡುತ್ತವೆ ಎನ್ನುವುದಕ್ಕೆ ಇದೇ ಘಟನೆ ಸಾಕ್ಷಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಟಿಎಂಸಿ ಸೇರ್ಪಡೆಗೂ ಮುನ್ನ ಕೇಶಮುಂಡನ ಮಾಡಿ ಆತ್ಮಶುದ್ಧಿ ಮಾಡಿಕೊಂಡ ಬಿಜೆಪಿ ಶಾಸಕ!

ಅತ್ಯಾಚಾರ ನಡೆದು ಕೇವಲ 9 ದಿನಗಳಲ್ಲಿಯೇ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

ಸಾವಿನ ಕೊನೆಯ ಕ್ಷಣದಲ್ಲಿ “ಅಪ್ಪಾ ಬೇಗ ಬನ್ನಿ” ಎಂದು ಮಗ ಹೇಳಿದ್ದ | ಮಗನ ಸಾವು ನೆನೆದು ಬಿಕ್ಕಿಬಿಕ್ಕಿ ಅತ್ತ ರೈತ

ಲಖೀಂಪುರ್ ಖೇರ್ ಸಚಿವನ ಪುತ್ರ ರೈತರನ್ನು ಕೆಣಕಿ, ಗುಂಡು ಹಾರಿಸಿದ್ದ | ಎಫ್ ಐಆರ್ ನಲ್ಲಿ ಉಲ್ಲೇಖ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಬರ್ಬರ ಹತ್ಯೆ | ತಾಯಿ ಹಾಗೂ ಆಕೆಯ ಪ್ರಿಯಕರ ಅರೆಸ್ಟ್

ಏಕಾಏಕಿ ಮುರಿದು ಬಿದ್ದ ತೂಗು ಸೇತುವೆ | ನದಿಗೆ ಬಿದ್ದ 30 ವಿದ್ಯಾರ್ಥಿಗಳು

ಸಚಿವ ಸಿ.ಸಿ.ಪಾಟೀಲ್ ಕಾರು ಬೈಕ್ ಗೆ ಡಿಕ್ಕಿ | ಬೈಕ್ ಸವಾರನನ್ನು ಬಿಟ್ಟು ಸಚಿವರನ್ನು ರಕ್ಷಿಸಲು ಪೊಲೀಸರಿಂದ ಯತ್ನ!?

ಆಸೆ ಪೂರೈಸು ಎಂದು ಪೀಡಿಸಿದ ವಿವಾಹಿತನ ಕಿರುಕುಳ ತಾಳಲಾರದೇ ದುರಂತ ಸಾವಿಗೀಡಾದ ಬಾಲಕಿ!

ಇತ್ತೀಚಿನ ಸುದ್ದಿ