ಮಾಡದ ತಪ್ಪಿಗೆ ಅಗ್ನಿ ಪರೀಕ್ಷೆ ಎದುರಿಸಿ ಬಂದಿದ್ದೇನೆ | ಕ್ಷೇತ್ರದ ಜನತೆ ಎದುರು ಶಶಿಕಲಾ ಜೊಲ್ಲೆ ಭಾವುಕ - Mahanayaka
10:59 AM Wednesday 26 - November 2025

ಮಾಡದ ತಪ್ಪಿಗೆ ಅಗ್ನಿ ಪರೀಕ್ಷೆ ಎದುರಿಸಿ ಬಂದಿದ್ದೇನೆ | ಕ್ಷೇತ್ರದ ಜನತೆ ಎದುರು ಶಶಿಕಲಾ ಜೊಲ್ಲೆ ಭಾವುಕ

shashikala jolle
06/08/2021

ನಿಪ್ಪಾಣಿ: ನಾನು ಮಾಡದ ತಪ್ಪಿಗೆ ಅಗ್ನಿ ಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಭಾವುಕ ನುಡಿಗಳನ್ನಾಡಿದ್ದು, ತನ್ನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಚಿವೆಯಾದ ಬಳಿಕ ಮೊದಲ ಬಾರಿಗೆ ನಿಪ್ಪಾಣಿ ಕ್ಷೇತ್ರಕ್ಕೆ ಆಗಮಿಸಿದ ಅವರು,  ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದರು.  ನಾನು ಯಾವುದೇ ತಪ್ಪು ಮಾಡಿಲ್ಲ, ಆ ರೀತಿಯಾಗಿ ಯಾವುದೇ ಮಾತುಕತೆಯನ್ನೂ ನಡೆಸಿಲ್ಲ. ಈ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ನೂತನ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಯಾವುದೇ ಇಲಾಖೆ ಮತ್ತು ಉಸ್ತುವಾರಿ ನೀಡುತ್ತಾರೋ ಆ ಜಿಲ್ಲೆಯ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಹಿಂದೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಮರ್ಥ ಮತ್ತು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿಯೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ವಿಶ್ವಾಸ ಗಳಿಸಿಕೊಂಡು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಇನ್ನಷ್ಟು ಸುದ್ದಿಗಳು…

 

ಶಾಕಿಂಗ್ ನ್ಯೂಸ್:  ಬ್ಲೂಟೂತ್ ಹೆಡ್ ಫೋನ್ ಸ್ಫೋಟ ಯುವಕ ದಾರುಣ ಸಾವು

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ

403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್

ಮೊಬೈಲ್ ಸಾಗಾಟದ ಲಾರಿ ತಡೆದು 6 ಕೋ.ರೂ. ಮೌಲ್ಯದ ಮೊಬೈಲ್ ದರೋಡೆ!

ಇತ್ತೀಚಿನ ಸುದ್ದಿ