ಮಧ್ಯಪ್ರದೇಶದಲ್ಲಿ ಎಲೆಕ್ಷನ್ ಡ್ಯೂಟಿ ಮಾಡಬೇಕಂದ್ರೆ ಮೊದ್ಲು ನನಗೆ ಮದುವೆ ಮಾಡಿಸಿ ಎಂದ ಶಿಕ್ಷಕ: ಕೊನೆಗೆ ಆಗಿದ್ದೇ ಶಾಕ್..! - Mahanayaka
6:26 PM Thursday 12 - December 2024

ಮಧ್ಯಪ್ರದೇಶದಲ್ಲಿ ಎಲೆಕ್ಷನ್ ಡ್ಯೂಟಿ ಮಾಡಬೇಕಂದ್ರೆ ಮೊದ್ಲು ನನಗೆ ಮದುವೆ ಮಾಡಿಸಿ ಎಂದ ಶಿಕ್ಷಕ: ಕೊನೆಗೆ ಆಗಿದ್ದೇ ಶಾಕ್..!

05/11/2023

ನೀವು ನನಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕು ಅಂತಾ ಹೇಳಿದ್ರೆ ಮೊದಲು ನನಗೆ ಮದುವೆ ಮಾಡಿಸಿ ಎಂದು ಶಿಕ್ಷಕರೊಬ್ಬರು ಸರ್ಕಾರಕ್ಕೆ ಪತ್ರ ಬರೆದು ಕೊನೆಗೆ ಸಸ್ಪೆಂಡ್ ಆಗಿರಿವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶ ಸತ್ನಾ ಜಿಲ್ಲೆಯ ಅಮರಪಟ್ಟಣದ ಶಾಲೆಯ ಶಿಕ್ಷಕ ಅಖಿಲೇಶ್​ ಕುಮಾರ್​ ಮಿಶ್ರಾ ಪತ್ರ ಬರೆದು ಅಮಾನತಾದ ವ್ಯಕ್ತಿ. ಇವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಮಗೆ 35 ವರ್ಷ ಆದರೂ ಇನ್ನೂ ಮದುವೆಯಾಗಿಲ್ಲ. ರಾತ್ರಿಗಳನ್ನು ಏಕಾಂಗಿಯಾಗಿ ಕಳೆಯುತ್ತಿದ್ದು, ನನಗೆ ಮೊದಲು ಮದುವೆ ಮಾಡಿಸಿ. ಅದರಂತೆ ವಧುವಿನ ಕಡೆಯಿಂದ ನನಗೆ 3.5 ಲಕ್ಷ ರೂ. ವರದಕ್ಷಿಣೆ, ಮನೆ ಖರೀದಿಸಲು ಬ್ಯಾಂಕ್​ ಲೋನ್, ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರದಲ್ಲಿ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಈಡೇರಿಕೆ ಈಡೇರಿಸದಿದ್ರೆ ತಾವು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಶಿಕ್ಷಕನ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರಿ ಅಧಿಕಾರಿಗಳು ಅಖಿಲೇಶ್‌ಗೆ ಶೋಕಾಸ್​ ನೋಟಿಸ್​ ಅನ್ನು ಜಾರಿ ಮಾಡಿದ್ದಾರೆ. ನೋಟಿಸ್​ಗೆ ಅಖಿಲೇಶ್​ ಪ್ರತಿಕ್ರಿಯಿಸದ ಕಾರಣ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಸೇವೆಯಿಂದ ವಜಾ ಮಾಡಲಾಗಿದೆ.

ಮಧ್ಯ ಪ್ರದೇಶದಲ್ಲಿ ಇನ್ನೇನೂ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇತ್ತೀಚಿನ ಸುದ್ದಿ