ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? | ರಮೇಶ್ ಜಾರಕಿಹೊಳಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸುಳಿವಿನ ಮಧ್ಯೆ ಶಾಸಕ ರಮೇಶ್ ಜಾರಕಿಹೊಳಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಚಿಂತನೆಯ ವೇಳೆ ರಮೇಶ್ ಜಾರಕಿಹೊಳಿ ಭೇಟಿ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಈ ಹಿಂದೆ ಸಚಿವರಾಗಿದ್ದ ವೇಳೆ, ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆಯಾಗಿತ್ತು. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಆ ನಿರೀಕ್ಷೆಗಳು ಸುಳ್ಳಾಗಿದ್ದವು. ಹೀಗಾಗಿ ರಮೇಶ್ ಜಾರಕಿಹೊಳಿ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದರು.
ಇದೀಗ ಸಚಿವ ಸಂಪುಟ ವಿಸ್ತರಣೆಯ ಸುಳಿವು ಲಭ್ಯವಾಗುತ್ತಿದ್ದಂತೆಯೇ ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಇಂದು ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳವರೆಗೆ ಸಿಎಂ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಯಡಿಯೂರಪ್ಪನವರ ಮಾಜಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಕೂಡ ಜೊತೆಗಿದ್ದರು.
ಇನ್ನೂ ಸಿಎಂ ಭೇಟಿಯ ಬಳಿಕ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಪಡೆಯಲು ಮಾಧ್ಯಮಗಳು ಮುಂದಾದಾಗ ಅವರು ಭೇಟಿಯ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಜೊತೆಗೆ ನಾನು ನಿಮ್ಮ ಮುಂದೆ ಏನೂ ಮಾತನಾಡಲ್ಲ, ನಾನು ಏನು ಮಾತನಾಡಿದರೂ ನೀವು ಉಲ್ಟಾ ಹಾಕುತ್ತೀರಿ ಎಂದು ಹೇಳಿದರು.
ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ ರಮೇಶ್ ಜಾರಕಿಹೊಳಿ, ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? ಎಂದು ಹೇಳಿದರು. ಏನು ಹೇಳಿದರೂ ಮಾಧ್ಯಮಗಳಲ್ಲಿ ಉಲ್ಟಾ ಸುದ್ದಿ ಪ್ರಸಾರ ಮಾಡಲಾಗುತ್ತೆ. ಹಾಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಬೇಸರ ವ್ಯಕ್ತಪಡಿಸಿ ಸ್ಥಳದಿಂದ ತೆರಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಪಠ್ಯಪುಸ್ತಕದಲ್ಲಿ ಪ್ರವಾದಿಯ ಅವಹೇಳನ: ಕ್ಯಾಂಪಸ್ ಫ್ರಂಟ್ ನಿಂದ ದೂರು
ದೇವರ ದರ್ಶನಕ್ಕೆ ಹೋದ ಸ್ವಾಮೀಜಿಯನ್ನು ದರದರನೇ ಎಳೆದೊಯ್ದ ದೇವಸ್ಥಾನದ ಸಿಬ್ಬಂದಿ: ವಿಡಿಯೋ ವೈರಲ್
ಆಟವಾಡುತ್ತಾ ಹೋದ ಬಾಲಕ ಮರಳಿ ಬರಲಿಲ್ಲ: ಬಾಲಕನನ್ನು ಬಲಿಪಡೆದ ನೀರಿನ ತೊಟ್ಟಿ
ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:
ಆಟವಾಡುತ್ತಾ ಹೋದ ಬಾಲಕ ಮರಳಿ ಬರಲಿಲ್ಲ: ಬಾಲಕನನ್ನು ಬಲಿಪಡೆದ ನೀರಿನ ತೊಟ್ಟಿ
“ಬಸ್ಸಿನಲ್ಲಿ ಓಡಾಡುತ್ತಿದ್ದ ಬಜರಂಗದಳದ ಕಾರ್ಯಕರ್ತ ಸಿ.ಟಿ.ರವಿ ಕೋಟಿ ರವಿ ಆಗಿದ್ದು ಹೇಗೆ?”