ಶವಗಳನ್ನು ನದಿಗೆಸೆಯುವ ವರದಿ ಮಾಡಿದ ಮಾಧ್ಯಮಗಳ ಮೇಲೆ ದೇಶದ್ರೋಹ ಪ್ರಕರಣ ಯಾಕೆ ದಾಖಲಿಸಿಲ್ಲ? | ಸುಪ್ರೀಂ ಕೋರ್ಟ್ ಪ್ರಶ್ನೆ! - Mahanayaka
4:43 PM Friday 20 - September 2024

ಶವಗಳನ್ನು ನದಿಗೆಸೆಯುವ ವರದಿ ಮಾಡಿದ ಮಾಧ್ಯಮಗಳ ಮೇಲೆ ದೇಶದ್ರೋಹ ಪ್ರಕರಣ ಯಾಕೆ ದಾಖಲಿಸಿಲ್ಲ? | ಸುಪ್ರೀಂ ಕೋರ್ಟ್ ಪ್ರಶ್ನೆ!

suprim court
01/06/2021

ನವದೆಹಲಿ:  ಶವಗಳನ್ನು ನದಿಗೆ ಎಸೆಯುವ ವರದಿಯನ್ನು ಟಿವಿ ಮಾಧ್ಯಮಗಳಲ್ಲಿ ನೋಡಿದೆ, ಅವುಗಳ ವಿರುದ್ಧ ಇನ್ನೂ ದೇಶದ್ರೋಹ ಪ್ರಕರಣ ದಾಖಲಿಸಲಿಲ್ಲವೇ? ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸರ್ಕಾರಕ್ಕೆ ಮಾರ್ಮಿಕ ಪ್ರಶ್ನೆಯನ್ನು ಹಾಕಿದ್ದಾರೆ.

ಕೊವಿಡ್ ಪರಿಸ್ಥಿತಿ ನಿರ್ವಹಣೆ ಮಾಡುವ ಮಾಧ್ಯಮಗಳನ್ನು ಶತ್ರುಗಳಂತೆ ನೋಡುತ್ತಿರುವ  ಉತ್ತರಪ್ರದೇಶ ಸರ್ಕಾರದ ನೀತಿಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ, ಉತ್ತರಪ್ರದೇಶದಲ್ಲಿ ನದಿ ಮೇಲಿನಿಂದ ಶವಗಳನ್ನು ಎಸೆಯುತ್ತಿರುವ ವಿಡಿಯೋವನ್ನು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದವು. ಈ ವರದಿಗಳನ್ನು ಮಾಡಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಿಲ್ಲವೇ? ನನಗೆ ಗೊತ್ತಿಲ್ಲ ಎಂದು ಪ್ರಶ್ನಿಸಿದರು.

ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೇಳುವವರ ವಿರುದ್ಧ ಸರ್ಕಾರ ಕೇಸು ದಾಖಲು ಮಾಡುತ್ತಿರುವ ಕುರಿತು ಹಲವು ಬಾರಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.


Provided by

ಏಪ್ರಿಲ್ 30ರಂದು ಅರ್ಜಿಯ ವಿಚಾರಣೆ ಸಮಯದಲ್ಲಿ ನ್ಯಾಯಾಲಯ ಕೋವಿಡ್ ಸಂರ್ಭದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಳ್ಳುವ ಬಗ್ಗೆ ಮಾತನಾಡಿತ್ತು. ಉತ್ತರ ಪ್ರದೇಶ ಸರ್ಕಾರ ಸಾಮಾಜಿಕ ಜಾಲತಾಣಗಳ ಮೂಲಕ ಕೋವಿಡ್ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್ ದೇಶದ್ರೋಹದ ಪ್ರಕರಣ ದಾಖಲಿಸಿಲ್ಲವೇ? ಎಂದು ಕೇಳಿದೆ.

ಪತ್ರಿಕಾ ಸ್ವಾತಂತ್ರ್ಯದ ಹಿನ್ನಲೆಯಲ್ಲಿ ಐಪಿಸಿ ಸೆಕ್ಷನ್ 124 ಎ ಬಗ್ಗೆ ವಿವರವಾದ ಅಭಿಪ್ರಾಯದ ಅಗತ್ಯವಿದೆ ಎಂದು ನ್ಯಾಯಮೂರ್ತಿ ಎಲ್. ನಾಗೇಶ್ವರರಾವ್, ರವೀಂದ್ರ ಭಟ್ ಅವರಿದ್ದ ಪೀಠ ತ್ರಿ ಸದಸ್ಯ ಪೀಠ ಹೇಳಿದೆ. ಕೋವಿಡ್ ಲಸಿಕೆ ಯೋಜನೆ ಕುರಿತು ಸಹ ನ್ಯಾಯಾಲಯ ವಿಚಾರಣೆ ವೇಳೆ ಗಮನಹರಿಸಿದ್ದು, ದೇಶಾದ್ಯಂತ ಒಂದೇ ದರದಲ್ಲಿ ಲಸಿಕೆ ಸಿಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಇತ್ತೀಚಿನ ಸುದ್ದಿ