“ಓ ಮಾರಿಕೊಂಡ ಮಾಧ್ಯಮಗಳೇ, ಹಂಸಲೇಖ ನೀಡಿದ್ದು 'ವಿವಾದಾತ್ಮಕ ಹೇಳಿಕೆ' ಅಲ್ಲ” | ಚಾಟಿ ಬೀಸಿದ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ - Mahanayaka

“ಓ ಮಾರಿಕೊಂಡ ಮಾಧ್ಯಮಗಳೇ, ಹಂಸಲೇಖ ನೀಡಿದ್ದು ‘ವಿವಾದಾತ್ಮಕ ಹೇಳಿಕೆ’ ಅಲ್ಲ” | ಚಾಟಿ ಬೀಸಿದ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ

dinesh kukkujadka
25/11/2021

ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿರುವ ಹೇಳಿಕೆಯನ್ನು ವಿವಾದಾತ್ಮಕ ಹೇಳಿಕೆ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಮತ್ತು ಹಂಸಲೇಖ ಅವರ ವಿರುದ್ಧ ಅನಗತ್ಯವಾಗಿ ಘೋಷಣೆ ಕೂಗುತ್ತಿರುವುದರ ವಿರುದ್ಧ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು,  ಓ ಮಾರಿಕೊಂಡ ಮಾಧ್ಯಮಗಳೇ, ಹಂಸಲೇಖ ನೀಡಿದ್ದು ಕೇವಲ ಹೇಳಿಕೆ. ‘ವಿವಾದಾತ್ಮಕ ಹೇಳಿಕೆ’ ಅಲ್ಲ. ಅದು ನಿಮಗೆ ‘ವಿವಾದಾತ್ಮಕ’ ಆಗಿರಬಹುದು. ನಮಗಲ್ಲ ಎಂದು ಹೇಳುವ ಮೂಲಕ, ಹಂಸಲೇಖ ಅವರ  ಹೇಳಿಕೆಯನ್ನು ವಿವಾದ ಎಂದು ಬಿಂಬಿಸುತ್ತಿರುವ ಮತ್ತು ವನ್ ಸೈಡ್ ಮಾಧ್ಯಮದ ನಡೆಯನ್ನು ಖಂಡಿಸಿದ್ದಾರೆ.

ಒಂದೊಮ್ಮೆ ಪುನೀತ್  ರಾಜ್‍ ಕುಮಾರ್ ಏನಾದ್ರೂ ಕೇಂದ್ರ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ಸಣ್ಣದೊಂದು ಹೇಳಿಕೆ ಕೊಟ್ಟಿದ್ದಿದ್ರೂ, ಅವರ ಸಾವಿಗೆ ಇದೇ ಅಭಿಮಾನಿಗಳ ಪೈಕಿ ಅರ್ಧಾಂಶ ಮಂದಿ ಸಂಭ್ರಮಿಸಿ ಪೋಸ್ಟ್ ಹಾಕುತ್ತಿದ್ದವು! ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಂಸಲೇಖ ಕನ್ನಡ ತಾಯಿಯ ಸಿರಿಮುಡಿಯಿಂದ ಒಂದೊಂದೇ ಬಂಗಾರದಂಥ ಪದ ಹೆಕ್ಕಿ ಪೋಣಿಸುವಾಗ ಸರಿಯಾಗಿ ಚೆಡ್ಡಿ ಹಾಕಲೂ ಬಾರದ ಮೂರ್ಖಪಡೆ ಅವರ ವಿರುದ್ಧ ಘೋಷಣೆ ಕೂಗುವುದನ್ನು ನೋಡಿದ ಮೇಲೆ ಹೀಗನಿಸಿಬಿಡ್ತು. ಅಂದು ಬಸವ, ಗಾಂಧಿ. ಇಂದು ಹಂಸಲೇಖ, ನಾವು , ನೀವು ಎಂದು ಬರೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬ್ರಾಹ್ಮಣರು ಕದ್ದು ಮುಚ್ಚಿ ಮಾಂಸ ಸೇವಿಸುತ್ತಾರೆ ಎಂದಿದ್ದ ಪೇಜಾವರ ಶ್ರೀ ಮೇಲೆ ಯಾಕೆ ಕೇಸು ಹಾಕಲಿಲ್ಲ? | ಹಂಸಲೇಖ ಬೆಂಬಲಿಗರ ಪ್ರಶ್ನೆ

ಶಾಕಿಂಗ್ ನ್ಯೂಸ್: ಕೈಯ ಮಣಿಕಟ್ಟು ಕೊಯ್ದುಕೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು

ರೈಲಿನಡಿಗೆ ತಲೆಯಿಟ್ಟು ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ | ವ್ಯವಸ್ಥೆಯನ್ನು ವಿಭಜಿಸುವ ಆಹಾರ ಶೋಷಿತರನ್ನು ಒಗ್ಗೂಡಿಸಲೂ ಸಾಧ್ಯ

ಬಡ ಜನತೆಗೆ ಸಿಹಿ ಸುದ್ದಿ ನೀಡಿದ ಪ್ರಧಾನಿ: ಉಚಿತ ಅಕ್ಕಿ ಯೋಜನೆ ಮುಂದುವರಿಕೆ

ಪೈಪ್ ಕತ್ತರಿಸಿದಾಗ ನೀರಿನ ಬದಲು ಬಂದದ್ದು ಕಂತೆ ಕಂತೆ ಹಣ! | ಎಸಿಬಿ ಅಧಿಕಾರಿಗಳಿಗೇ ಶಾಕ್!

ಇತ್ತೀಚಿನ ಸುದ್ದಿ