ಗಡ್ಡ ಬಿಟ್ಟದ್ದೇ ತಪ್ಪಂತೆ: ಶಿಕ್ಷೆಗೊಳಗಾಗಿದ್ದ ಕಾನ್ಸ್ ಟೇಬಲ್ ಗೆ ಮದ್ರಾಸ್ ಕೋರ್ಟ್ ನಿಂದ ರಿಲೀಫ್ - Mahanayaka

ಗಡ್ಡ ಬಿಟ್ಟದ್ದೇ ತಪ್ಪಂತೆ: ಶಿಕ್ಷೆಗೊಳಗಾಗಿದ್ದ ಕಾನ್ಸ್ ಟೇಬಲ್ ಗೆ ಮದ್ರಾಸ್ ಕೋರ್ಟ್ ನಿಂದ ರಿಲೀಫ್

16/07/2024

ಗಡ್ಡ ಬಿಟ್ಟದ್ದಕ್ಕಾಗಿ ಶಿಸ್ತು ಕ್ರಮಕ್ಕೆ ಒಳಗಾಗಿದ್ದ ಅಬ್ದುಲ್ ಖಾದರ್ ಇಬ್ರಾಹಿಂ ಎಂಬ ಕಾನ್ಸ್ ಟೇಬಲ್ ಗೆ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಬಿಗ್ ರಿಲೀಫ್ ನೀಡಿದೆ.

ಭಾರತ ವಿವಿಧ ಧರ್ಮಗಳ ನಾಡಾಗಿದೆ ಮತ್ತು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಗಡ್ಡ ಇರಿಸಿಕೊಂಡ ಮುಸ್ಲಿಂ ಉದ್ಯೋಗಿಯನ್ನು ಪೊಲೀಸ್ ಇಲಾಖೆ ಶಿಕ್ಷಿಸುವಂತಿಲ್ಲ ಎಂದು ನ್ಯಾಯ ಮೂರ್ತಿ ವಿಕ್ಟೋರಿಯಾ ಗೌರಿ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ

2018 ರಲ್ಲಿ ಇಬ್ರಾಹಿಂ ಎಂಬ ಈ ಕಾನ್ಸ್ಟೇಬಲ್ ಅವರು ಮಕ್ಕ ಮತ್ತು ಮದೀನ ಯಾತ್ರೆ ಕೈಗೊಳ್ಳುವುದಕ್ಕಾಗಿ 30 ದಿನಗಳ ರಜೆಯನ್ನು ಕೋರಿದ್ದರು. ವಾಪಸ್ ಬರುವಾಗ ಅವರ ಕಾಲಿಗೆ ಸೋಂಕು ಉಂಟಾಗಿತ್ತು. ಅದಕ್ಕಾಗಿ ಚಿಕಿತ್ಸೆ ನಡೆಸುವುದಕ್ಕೆ ಇನ್ನಷ್ಟು ಸಮಯವನ್ನು ಕೋರಿದ್ದರು. ಆದರೆ ಅವರಿಗೆ ಎಸಿಪಿ ರಜೆಯನ್ನು ನಿರಾಕರಿಸಿದ್ದರು ಮಾತ್ರ ಅಲ್ಲ ತಮ್ಮ ಮುಂದೆ ಗಡ್ಡದಾರಿಯಾಗಿ ಹಾಜರಾದ ಈ ಕಾನ್ಸ್ಟೇಬಲ್ ಕ್ರಮವನ್ನು ಅವರು ಪ್ರಶ್ನಿಸಿದ್ದರು.


Advertisement

ನಿಮ್ಮ ಗಡ್ಡ ಪೊಲೀಸ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿ ಡಿಸಿಪಿ ಈ ಕಾನ್ಸ್ಟೇಬಲ್ ನಿಂದ ವಿವರಣೆ ಕೋರಿದ್ದರು.. 2021 ರಲ್ಲಿ ಈ ಕಾನ್ಸ್ಟೇಬಲ್ ಅವರ ವೇತನ ಹೆಚ್ಚಳವನ್ನು ಪೊಲೀಸ್ ಆಯುಕ್ತರು ತಡೆಹಿಡಿದಿದ್ದರು. ಇದನ್ನು ಪ್ರಶ್ನಿಸಿ, ಈ ಕಾನ್ಸ್ಟೇಬಲ್ ಹೈಕೋರ್ಟ್ ಮೆಟ್ಟಿಲೇರಿದ್ದರು

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ