ಜೂಜಾಟಕ್ಕೆ ಬೆಂಬಲ | ಕೊಹ್ಲಿ, ಗಂಗೂಲಿ, ತಮನ್ನಾ, ರಾಣಾ ದಗ್ಗುಬಾಟಿಗೆ ಹೈಕೋರ್ಟ್ ನೋಟಿಸ್ - Mahanayaka

ಜೂಜಾಟಕ್ಕೆ ಬೆಂಬಲ | ಕೊಹ್ಲಿ, ಗಂಗೂಲಿ, ತಮನ್ನಾ, ರಾಣಾ ದಗ್ಗುಬಾಟಿಗೆ ಹೈಕೋರ್ಟ್ ನೋಟಿಸ್

04/11/2020

ಚೆನ್ನೈ: ಆನ್ ಲೈನ್ ಮೊಬೈಲ್ ಗೇಮಿಂಗ್ ಆಪ್ ಪರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ, ನಟಿ ತಮನ್ನಾ, ರಾಣಾ ದಗ್ಗುಬಾಟಿಗೆ ಮದ್ರಾಸ್ ಹೈಕೋರ್ಟ್ ಜಾರಿ ಮಾಡಿದೆ.


ಮಧುರೈ ನಿವಾಸಿ ಮೊಹಮ್ಮದ್ ಎಂಬವರು ಮಧುರೈ ಪೀಠದಲ್ಲಿ ಆನ್ ಲೈನ್ ಗೇಮಿಂಗ್ ಆಪ್ ಗಳನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ.


ಆನ್ ಲೈನ್ ಮೊಬೈಲ್ ಗೇಮಿಂಗ್ ಜೂಜಾಟವು ಯಾವ ಕಾನೂನಿನಡಿಗೆ ಒಳಪಡುತ್ತದೆ ಎಂಬ ಬಗ್ಗೆ ಹಲವು ಸಮಯಗಳಿಂದ ಚರ್ಚೆಗಳು ಆರಂಭವಾಗಿದೆ. ಆನ್ ಲೈನ್ ನ ಇಂತಹ ಆಟಗಳ ಬಗ್ಗೆ ಹೊಸ ನಿಯಮಾವಳಿಗಳನ್ನು ತರಬೇಕು ಎಂಬ ಚಿಂತನೆಗಳು ನಡೆಯುತ್ತಿವೆ.


ಇತ್ತೀಚಿನ ಸುದ್ದಿ