11:21 AM Wednesday 12 - March 2025

ಮದುವೆ ಪ್ರಸ್ತಾಪ ತಿರಸ್ಕರಿಸಿದ ತಾಯಿ ಮಗಳ ಭೀಕರ ಕೊಲೆ!

08/03/2021

ಆಗ್ರಾ:  ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ  ಯುವತಿ ಹಾಗೂ ಆಕೆಯ ತಾಯಿಯನ್ನು ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಮೃತರ  ಆಪ್ತ ಸಂಬಂಧಿ ಮಹಿಳೆಯ ಮೇಲೆ ಕೂಡ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.

ಗೋವಿಂದ್  ಎಂಬಾತ ಈ ಭೀಕರ ಕೃತ್ಯವನ್ನು ನಡೆಸಿದವಾಗಿದ್ದಾನೆ. ತನ್ನ ನೆರೆಯ ಮನೆಯ 19 ವರ್ಷ ವಯಸ್ಸಿನ ಬಾಲಕಿಯ ಮೇಲೆ ಈತ ಕಣ್ಣಿಟ್ಟಿದ್ದ. ಆಕೆಯನ್ನು ಮದುವೆಯಾಗಬೇಕು ಎಂದು ಅನ್ನಿಸಿದಾಗ, ಆಕೆಯ ತಾಯಿಯ ಬಳಿಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾನೆ.

ಆದರೆ ಈ ಮದುವೆ ಯುವತಿಗೆ ಹಾಗೂ ಆಕೆಯ ತಾಯಿ ಇಬ್ಬರಿಗೂ ಇಷ್ಟವಿರಲಿಲ್ಲ. ಹೀಗಾಗಿ ಅವರು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಗೋವಿಂದ ಮದುವೆ ಪ್ರಸ್ತಾಪ ಇಟ್ಟ ಬೆನ್ನಲ್ಲೇ ಯುವತಿಗೆ ಬೇರೊಂದು ಸಂಬಂಧ ಹುಡುಕಿದ ಯುವತಿಯ ತಾಯಿ ಮದುವೆ ಮಾಡಲು ಮುಂದಾಗಿದ್ದು, ಇದರಿಂದ ಆರೋಪಿ ರೊಚ್ಚಿಗೆದ್ದಿದ್ದಾನೆ.

ಯುವತಿಯ ಮನೆಗೆ ನುಗ್ಗಿದ ಗೋವಿಂದ ತಾಯಿ ಹಾಗೂ ಮಗಳನ್ನು ಹತ್ಯೆ ಮಾಡಿದ್ದು, ತಡೆಯಲು ಬಂದ ಸಂಬಂಧಿ ಮಹಿಳೆಗೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಮದುವೆ ಮನೆ ಸದ್ಯ ಸ್ಮಶಾನವಾಗಿ ಮಾರ್ಪಟ್ಟಿದೆ.

ಇತ್ತೀಚಿನ ಸುದ್ದಿ

Exit mobile version