ಮದುವೆ ಮಂಟಪದಲ್ಲಿ ಗುಟ್ಕಾ ಜಗಿದ ವರನಿಗೆ ಕಪಾಳಕ್ಕೆ ಬಾರಿಸಿ ಉಗುಳಿಸಿದ ವಧು! | ವಿಡಿಯೋ ವೈರಲ್

ನವದೆಹಲಿ: ಗುಟ್ಕಾ ಪ್ರಿಯ ವರ ಮದುವೆ ಮಂಟಪದಲ್ಲಿಯೂ ಗುಟ್ಕಾ ಹಾಕಿಕೊಂಡು ಕುಳಿತಿದ್ದ. ಇದನ್ನು ನೋಡಿದ ವಧು, ನೀನು ಮದುವೆ ದಿನವೂ ಗುಟ್ಕಾ ತಿಂತಿದ್ದೀಯಾ? ಎಂದು ಪ್ರಶ್ನಿಸಿ ವೇದಿಕೆಯಲ್ಲಿಯೇ ಆತನ ಕಪಾಳಕ್ಕೆ ಬಾರಿಸಿ, ಗುಟ್ಕಾ ಉಗುಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಉತ್ತರ ಭಾರತದಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗಿದೆ. ವಿಡಿಯೋದಲ್ಲಿ ವಧುವರರು ಕುಳಿತುಕೊಂಡಿದ್ದಾರೆ. ಈ ವೇಳೆ ಗುಟ್ಕಾ ಪ್ರಿಯ ವರ ಗುಟ್ಕಾ ಜಗಿಯಲು ಆರಂಭಿಸುತ್ತಾನೆ. ಈ ವೇಳೆ ವಧು ಅದಕ್ಕೆ ವರನಿಗೆ ಬೈಯಲು ಆರಂಭಿಸುತ್ತಾಳೆ. ಈ ಸಂದರ್ಭ ಆತನ ಸ್ನೇಹಿತ ಮಧ್ಯೆ ಪ್ರವೇಶಿಸುತ್ತಾನೆ. ಆಗ ಸಿಟ್ಟಾದ ವಧು ಆತನ ಸ್ನೇಹಿತನಿಗೆ ಒಂದೇಟು ಬಿಗಿಯುತ್ತಾಳೆ. ಜೊತೆಗೆ ವರನ ಕಪಾಳಕ್ಕೆ ಬಾರಿಸಿ ಹೋಗಿ ಉಗುಳಿ ಬಾ ಎಂದು ಅವಾಜ್ ಹಾಕುತ್ತಾಳೆ. ವಧುವಿನ ಏಟಿಗೆ ಹೆದರಿ ವರ ಬೇಗನೇ ಹೋಗಿ ಉಗುಳಿ ಬಂದು ಮತ್ತೆ ಕುಳಿತುಕೊಂಡಿದ್ದಾನೆ.
ಸಾಮಾನ್ಯವಾಗಿ ಮಹಿಳೆಯರು ಗುಟ್ಕಾ ತಿನ್ನುವ ಗಂಡಸರನ್ನು ಇಷ್ಟವೇ ಪಡುವುದಿಲ್ಲ. ಗುಟ್ಕಾ ತಿನ್ನುವವರ ಬಾಯಿ ಯಾವಾಗ ನೋಡಿದರೂ ಕೊಳಕಾಗಿರುತ್ತದೆ. ಹೀಗಾಗಿ ಕೆಲವರು ಗುಟ್ಕಾ ತಿನ್ನುವವರ ಸಮೀಪವೂ ಸುಳಿಯುವುದಿಲ್ಲ. ಈ ವಧು ಕೂಡ ಹಾಗೆಯೇ ತನ್ನ ಜೀವನ ಸಂಗಾತಿಗೆ ಗುಟ್ಕಾ ತಿನ್ನುವ ಛಾಳಿ ಇರಬಾರದು ಎಂದು ಮದುವೆ ವೇದಿಕೆಯಿಂದಲೇ ತನ್ನ ಗಂಡನಿಗೆ ಮೂಗುದಾರ ಹಾಕಲು ಆರಂಭಿಸಿದ್ದಾಳೆ. ವರನ ಸ್ಥಿತಿ ನೋಡಿ, ಮದುವೆ ಮಂಟಪದಲ್ಲಿದ್ದವರೆಲ್ಲ ಜೋರಾಗಿ ನಗುತ್ತಿರುವುದು ವಿಡಿಯೋದಲ್ಲಿ ಕೇಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
“ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ…” | ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ
ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!
ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?
ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ
ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ
ಕೊಪ್ಪಳದಲ್ಲಿ ಅಸ್ಪೃಶ್ಯತಾ ಆಚರಣೆ ಪ್ರಕರಣ: ಐವರು ಕಿಡಿಗೇಡಿಗಳ ಅರೆಸ್ಟ್