“ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಗೂ ಬಾಡಿಗೆಗೆ ಕೊಡಬಹುದು” - Mahanayaka
4:02 PM Thursday 12 - December 2024

“ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಗೂ ಬಾಡಿಗೆಗೆ ಕೊಡಬಹುದು”

congress
25/09/2021

ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಪ್ರಜಾಪ್ರಭುತ್ವದ ಮೌಲ್ಯ ಅರಿಯದ ಬಿಜೆಪಿ ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣವನ್ನು ಮದುವೆ, ಮುಂಜಿಯಂತಹ ಸಮಾರಂಭಗಳಿಗೆ ಬಾಡಿಗೆ ಕೊಡಬಹುದು ಎಂದು ಟೀಕಿಸಿದೆ.

ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಗೌರವಾನ್ವಿತ ಸದನವನ್ನು ಬಿಜೆಪಿಯು ಮದುವೆ ಛತ್ರ ಎಂದು ಭಾವಿಸಿದೆ. ನಿಯಮ ಮೀರಿ ಸದನ ಸದಸ್ಯರಲ್ಲದವರನ್ನು ಕರೆಸಿ ಭಾಷಣ ಮಾಡಿಸಿ ಯಾವ ಘನ ಕಾರ್ಯ ಸಾಧಿಸಿದಂತಾಯಿತು ಎಂದು ಆಕ್ರೋಶ ವ್ಯಕ್ತ ಪಡಿಸಲಾಗಿದ್ದು, ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನು ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ ಎಂದು ಲೇವಡಿ ಮಾಡಿದೆ.

ಪ್ರಜಾಪ್ರಭುತ್ವದ ಘನತೆ ಅರಿಯದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ. ಸದನದ ಸದಸ್ಯರಲ್ಲದವರಿಗೆ ಪ್ರವೇಶವಿಲ್ಲದಿರುವಾಗ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾರನ್ನು ಯಾವ ನಿಯಮಗಳ ಅಡಿಯಲ್ಲಿ ಕರೆಸಲಾಯಿತು, ಅವರ ಭದ್ರತಾ ಸಿಬ್ಬಂದಿಗೆ ಸದನದೊಳಗೆ ಪ್ರವೇಶಿಸಲು ಅನುಮತಿ ನೀಡಿದವರು ಯಾರು? ಚರ್ಚೆ ನಡೆಸಬೇಕಾದ ಸ್ಥಳದಲ್ಲಿ ಸಮಾರಂಭ ನಡೆಸಿದ್ದೇಕೆ? ನಿರೂಪಕರನ್ನ ಸದನದೊಳಗೆ ಕರೆತಂದಿದ್ದೇಕೆ? ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ವಿಧಾನಸಭೆಯ ಸಭಾಂಗಣದಲ್ಲಿ ನಡೆದ ಜಂಟಿ ಅವೇಶನದಲ್ಲಿ ಭಾಗವಹಿಸಿದ್ದ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಭಾಷಣ ಮಾಡಿದರು. ಅದೇ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉತ್ತಮ ಶಾಸಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು, ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ | ಆರೋಪಿ ಅರೆಸ್ಟ್

ನಿದ್ದೆಯಿಂದ ಎಚ್ಚರವಾದ ವೇಳೆ ಆತ ಅತ್ಯಾಚಾರ ನಡೆಸ್ತಿದ್ದ | ಅತ್ಯಾಚಾರಕ್ಕೂ ಮುನ್ನ ಸಂತ್ರಸ್ತೆಯ ವಿಶ್ವಾಸಗಳಿಸಿದ್ದ ಕ್ಯಾಬ್ ಡ್ರೈವರ್!

ಸೆ.26ರಂದು ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ | ಅವರ ಕಿರುಪರಿಚಯ ಇಲ್ಲಿದೆ

ಅ.2: ದ.ಕ. ಬಾಮ್ಸೆಫ್ ನಿಂದ ಪೂನಾ ಒಪ್ಪಂದ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯಾಗಾರ

ತುಪ್ಪ ಬೇಕಾ ತುಪ್ಪ ಎಂದು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದ ಮಹಿಳೆಯರು ಅರೆಸ್ಟ್ | ಅಷ್ಟಕ್ಕೂ ಇವರು ಮಾಡ್ತಿದ್ದದ್ದೇನು ಗೊತ್ತಾ?

ಪ್ರೀತಿಸಿ ವಿವಾಹವಾದ ಪತ್ನಿಗೆ ಅಕ್ರಮ ಸಂಬಂಧ | ಫೇಸ್ ಬುಕ್ ಲೈವ್ ಗೆ ಬಂದು ಪತ್ನಿ ಆತ್ಮಹತ್ಯೆ

ಮಾಟ ಮಂತ್ರದ ಕಾರಣ ನೀಡಿ, ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರಿಗೆ ತಲವಾರು ಬೀಸಿದ ಯುವಕ | ಓರ್ವ ಮಹಿಳೆ ಸ್ಥಿತಿ ಗಂಭೀರ

ಇತ್ತೀಚಿನ ಸುದ್ದಿ