ಮದುವೆ ಸಂಭ್ರಮದಲ್ಲಿದ್ದ ಜೋಡಿಯ ನೆಮ್ಮದಿ ಕೆಡಿಸಿದ ಸಂಪ್ರದಾಯವಾದಿಗಳು!
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಸಂಪ್ರದಾಯವಾದಿಗಳು ಯುವ ಜೋಡಿಯ ಸಂತಸಕ್ಕೆ ತಣ್ಣೀರೆರಚಿದ್ದು, ಮದುವೆ ಸಂಭ್ರಮದಲ್ಲಿದ್ದ ಜೋಡಿ ಕ್ಷಮೆ ಕೇಳುವಂತೆ ಮಾಡಿದ್ದಾರೆ.
ಜೂನ್ 9ರಂದು ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ದಿನ ನವ ದಂಪತಿಗಳು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋಗಳಲ್ಲಿ ದೋಷ ಹುಡುಕಿದ ಕೆಲವು ಸಂಪ್ರದಾಯವಾದಿಗಳು ನಯನತಾರಾ ಅವರು ಪಾದರಕ್ಷೆ ಧರಿಸಿ, ದೇಗುಲದ ಆವರಣದಲ್ಲಿ ನಡೆದಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಟಿಟಿಡಿ ನಿಯಮಗಳ ಪ್ರಕಾರ ತಿರುಪತಿ ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಬಾರದು. ಆದರೆ ನಿಯಮ ಉಲ್ಲಂಘಿಸಿ ಜೋಡಿ ಚಪ್ಪಲಿ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದರು.
ಇನ್ನೂ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಜೋಡಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ನಡುವೆ ಘಟನೆಯ ಬಗ್ಗೆ ಕ್ಷಮೆ ಕೇಳಿರುವ ಜೋಡಿ, ತಿರುಪತಿ ತಿರುಮಲದ ಬಗ್ಗೆ ನಮ್ಮಲ್ಲಿ ಅಪಾರ ಭಕ್ತಿ-ನಂಬಿಕೆ ಇದೆ. ಮದುವೆಯ ನಂತರ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕಾಗಿ ಮಂಟಪದಿಂದ ಇಲ್ಲಿಗೆ ಬಂದಿದ್ದೆವು. ಆದರೆ ದೇವಸ್ಥಾನದ ಹೊರಗೆ ಭಕ್ತಾದಿಗಳು ಹೆಚ್ಚಾಗಿ ನೆರೆದಿದ್ದರಿಂದ ಎರಡನೇ ಬಾರಿಗೆ ಫೋಟೋ ತೆಗೆಯಲು ಬಂದಿದ್ದೆವು. ಈ ವೇಳೆ ಅಚಾತುರ್ಯ ಜರುಗಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾರುಗಳ ಮುಖಾಮುಖಿ ಡಿಕ್ಕಿ: ನಜ್ಜುಗುಜ್ಜಾದ ಕಾರುಗಳು!
ಮೃಗಾಲಯದ ಮುಂದೆ ಕಾಣಿಸಿಕೊಂಡ ವಿಚಿತ್ರ ಜೀವಿ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ: ಗಾಯಗೊಂಡಿದ್ದ ಇಬ್ಬರು ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕತ್ತೆ ಸಾಕಣಿಕೆ ಕೇಂದ್ರ ಸ್ಥಾಪಿಸಿದ ರಾಮನಗರದ ಶ್ರೀನಿವಾಸ್ ಗೌಡ
ಕಾಂಗ್ರೆಸ್ ನ ಹೀನಾಯ ಸೋಲು: ‘ಚಿಂತಿಸಿ ಫಲವಿಲ್ಲ’ ಎಂದ ಡಿ.ಕೆ.ಶಿವಕುಮಾರ್