ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವರ: ಅತಿಥಿ ಸಾವು
ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಮದುವೆಯ ವೇಳೆ ವರ ಗುಂಡು ಹಾರಿಸಿದ ಪರಿಣಾಮ ಮದುವೆ ಸಂಭ್ರಮಕ್ಕೆ ಬಂದಿದ್ದ ಒಬ್ಬ ಅತಿಥಿ ಸಾವನ್ನಪ್ಪಿದ ಘಟನೆ ಸೋನಬದ್ರಾ ಜಿಲ್ಲೆಯ ಬ್ರಹ್ಮನಗರದಲ್ಲಿ ನಡೆದಿದೆ.
ಮದುವೆಯ ಆಚರಣೆಯ ಅಂಗವಾಗಿ ವರನನ್ನು ರಥದಲ್ಲಿ ಕರೆತಂದು ನಂತರ ಗನ್ ತೆಗೆದು ಶೂಟ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮನೀಶ್ ಮದೇಶಿಯಾ ಎಂಬಾತನ ಮದುವೆ ಈ ರೀತಿ ದುರಂತದಲ್ಲಿ ಕೊನೆಗೊಂಡಿದೆ. ಈತನ ಸ್ನೇಹಿತನಾದ ಸೈನಿಕನ ಮೇಲೆಯೆ ಗುಂಡು ತಗುಲಿದ್ದು ವರನ ಬಳಿಯಿದ್ದ ಗನ್ ಈತನದ್ದು ಎಂದು ತಿಳಿದು ಬಂದಿದೆ. ಕೂಡಲೇ ಸೈನಿಕನನ್ನು ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ವರನನ್ನು ಬಂಧಿಸಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳು ಮತ್ತು ಆಚರಣೆಗಳಲ್ಲಿ ಬಂದೂಕುಗಳ ಬಳಕೆಯನ್ನು ನಿಷೇಧಿಸಲಾಗಿದ್ದರು. ಈ ಹುಚ್ಚಾಟಗಳು ಇನ್ನೂ ನಿಂತಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾರೀ ಪ್ರವಾಹಕ್ಕೆ ಸಿಲುಕಿ 40 ಮಂದಿ ಸಾವು: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ
ಹಳ್ಳದಲ್ಲಿ ತೇಲಿ ಬಂದ ನಾಲ್ಕು ನವಜಾತ ಶಿಶುಗಳ ಮೃತದೇಹ!
ಇಂಗ್ಲಿಷ್ ಮಾತನಾಡದಿದ್ದಕ್ಕೆ 4 ವರ್ಷದ ಬಾಲಕನಿಗೆ ಥಳಿತ: ಶಿಕ್ಷಕ ಅರೆಸ್ಟ್
ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡ ಜಯಂತಿ ಆಚರಣೆ ಅರ್ಥಹೀನ: ಸಚಿನ್ ಸರಗೂರು