ತನ್ನ ಮಗನ ಮದುವೆಗೆ ಕಾರ್ಮಿಕರನ್ನು ಗೌರವ ಪೂರ್ವಕವಾಗಿ ಆಹ್ವಾನಿಸಿದ ಜನಪ್ರತಿನಿಧಿ - Mahanayaka
9:19 AM Thursday 12 - December 2024

ತನ್ನ ಮಗನ ಮದುವೆಗೆ ಕಾರ್ಮಿಕರನ್ನು ಗೌರವ ಪೂರ್ವಕವಾಗಿ ಆಹ್ವಾನಿಸಿದ ಜನಪ್ರತಿನಿಧಿ

13/02/2021

ಹಾವೇರಿ: ತಮ್ಮ ಮಗನ ಮದುವೆಗೆ ಶ್ರಮಿಕ ವರ್ಗವನ್ನು ಗೌರವಯುತವಾಗಿ ಆಹ್ವಾನಿಸುವ ಮೂಲಕ ಇಲ್ಲೊಬ್ಬರು ಜನಪ್ರತಿನಿಧಿ ಗಮನ ಸೆಳೆದಿದ್ದು, ಸಾಮಾನ್ಯವಾಗಿ ಗಣ್ಯರ ಮನೆಯ ಮದುವೆ ಎಂದರೆ, ಬಡವರ ನೆರಳು ಕೂಡ ತಾಗದಂತೆ ನಡೆಯುತ್ತದೆ. ಆದರೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಅವರು ಕಾರ್ಮಿಕರಿಗೆ ಅದ್ದೂರಿ ಆಹ್ವಾನ ನೀಡಿದ್ದಾರೆ.

ರಸ್ತೆ ಬದಿಯಲ್ಲಿ ಬೆವರು ಸುರಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ಒಂದು ಲಗ್ನ ಪತ್ರಿಕೆ ಜೊತೆಯಲ್ಲಿ ಒಂದು ಸೇರೆಯನ್ನೂ ನೀಡಿದ್ದು,  ನಗರದಿಂದ ಬಸ್ ನಿಲ್ದಾಣದ ಬಳಿಯವರೆಗೆ ಇರುವ ಕಾರ್ಮಿಕರಿಗೆ ತಮ್ಮ ಗಮನ ಮದುವೆಗೆ ಆಹ್ವಾನ ನೀಡಿದ್ದಾರೆ.

“ನನ್ನ ಮಗನ ಮದುವೆ ಇದೇ ತಿಂಗಳ 14ರ ಭಾನುವಾರದಂದು ನಡೆಯಲಿದೆ. ಎಲ್ಲರೂ ಮದುವೆಗೆ ಬರಬೇಕು ಎಂದು ಮೇಗಳಮನಿ ಅವರು ಕಾರ್ಮಿಕರನ್ನು ಅತ್ಯಂತ ಪ್ರೀತಿಯಿಂದ ಕರೆದಿದ್ದಾರೆ.

ಇತ್ತೀಚಿನ ಸುದ್ದಿ